ಉಜಿರೆಯಲ್ಲಿ ಮ್ಯೂಸಿಕ್ರಾಫ್ಟ್ ಅಕಾಡೆಮಿ ಶುಭಾರಂಭ

0

ಉಜಿರೆ: ಬೆಳ್ತಂಗಡಿ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಉಜಿರೆಯಲ್ಲಿ ಮೆಲ್ ರಾಯ್ ಮತ್ತು ಶರ್ವಿನ್ ಮಾಲಕತ್ವದ ಮ್ಯೂಸಿಕ್ರಾಫ್ಟ್ ಅಕಾಡೆಮಿ ಜ.31ರಂದು ಶುಭಾರಂಭಗೊಂಡಿದೆ.

ಸಂಸ್ಥೆಯನ್ನು ಹಿನ್ನೆಲೆ ಗಾಯಕಿ ಜೋಶಲ್ ಡಿಸೋಜಾ ಉದ್ಘಾಟಿಸಿ ಗ್ರಾಮಾಂತರ ಪ್ರದೇಶದಲ್ಲಿ ಬಹಳ ಅಗತ್ಯಉಳ್ಳ ಸಂಸ್ಥೆ ಪ್ರಾರಂಭಗೊಂಡಿದೆ.ನಾನು ಮ್ಯೂಸಿಕ್ ಕಲಿಯುವ ಸಂದರ್ಭದಲ್ಲಿ ಬಹಳಷ್ಟು ಕಷ್ಟ ಪಟ್ಟಿದ್ದೇನೆ.ಮ್ಯೂಸಿಕ್ ಕಲಿಯಲು ಗಾಯನ ತರಬೇತಿ ಪಡೆಯಲು ದೂರದ ಮಂಗಳೂರಿಗೆ ಹೋಗಬೇಕಿತ್ತು.ಮೆಲ್ ರಾಯ್ ಮ್ಯೂಸಿಕ್ ಕಲಿಯಲು ಬೆಂಗಳೂರಿಗೆ ಹೋಗಿ ಮ್ಯೂಸಿಕ್ ಕಲಿತು, ಈಗ ಸ್ವಂತ ಊರಿನಲ್ಲಿ ಸಂಸ್ಥೆ ಪ್ರಾರಂಭಿಸಿರುವುದು ಅಭಿನಂದಾರ್ಹ.ಈ ಸಂಸ್ಥೆ ಬೆಳೆದು ಇದರ ಉಪಯೋಗ ಗ್ರಾಮೀಣ ಮಕ್ಕಳಿಗೆ ಈ ಅವಕಾಶ ಲಭಿಸಲಿ.

ಉಜಿರೆ ಸಂತ ಅಂತೋನಿ ಚರ್ಚ್ ಧರ್ಮಗುರು ವ. ಫಾ. ಜೇಮ್ಸ್ ಡಿಸೋಜಾ ಆಶೀರ್ವಚನಗೈದು ಸವೆದ ದಾರಿಯಲ್ಲಿ ನಡೆಯುವುದು ಸುಲಭ.ಸವೆಯದ ದಾರಿಯಲ್ಲಿ ನಡೆಯಲು ಕಾಡು ಪ್ರಾಣಿಗಳ ಭಯ ಎದುರಾಗುತ್ತದೆ.ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಮ್ಯೂಸಿಕ್ ಕೂಡ ಸವೆಯದ ದಾರಿ ಇದ್ದಂತೆ.ಅದು ಇಂದು ಧೈರ್ಯ ಮಾಡಿ ಸ್ಥಾಪಿಸಿದ ಸಂಸ್ಥೆ ಯಶಸ್ವಿಯಾಗಲಿ ಎಂದರು.

ಮಂಗಳೂರು ನಗರ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್ ಮಾತನಾಡಿ ನಾನು ಮತ್ತು ಮೆಲ್ವಿನ್ ಫೆರ್ನಾಂಡಿಸ್ ಒಟ್ಟಿಗೆ ಆರ್ಮಿ ಸೇರಿ ದೇಶ ಸೇವೆ ಮಾಡಿದ್ದೇವೆ.ಇದೀಗ ಮೆಲ್ವಿನ್ ರವರ ಪುತ್ರ ಮೆಲ್ ರೊಯ್ ಫೆರ್ನಾಂಡಿಸ್ ಸಮಾಜದ ಒಳಿತಿಗಾಗಿ ಮ್ಯೂಸಿಕ್ ಸಂಸ್ಥೆ ಪ್ರಾರಂಭಿಸಿದ್ದಾರೆ.ಇದು ಸಮಾಜಕ್ಕೆ ಬಹಳಷ್ಟು ಅಗತ್ಯವಿದೆ.ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ಸಂಸ್ಥೆ ಪ್ರಾರಂಭಿಸಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಉಜಿರೆ ಫಾ.ವಿನೋದ್, ಫಾ.ಎಡ್ವಿನ್, ಧರ್ಮ ಭಗಿನಿಯರು, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಹಳ್ಳಿಮನೆ ಪ್ರವೀಣ್ ಫೆರ್ನಾಂಡಿಸ್, ಅರುಣ್ ರೆಬೆಲ್ಲೊ, ಉಜಿರೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅನಿಲ್ ಡಿಸೋಜಾ, ಜಾನೆಟ್ ರೊಡ್ರಿಗಸ್, ಗುರಿಕಾರ ವಲೇರಿಯನ್ ಪಿಂಟೊ, ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.ಲವೀನಾ ಫೆರ್ನಾಂಡಿಸ್ ಸ್ವಾಗತಿಸಿದರು.ಮಾಲಕ ಮೆಲ್ ರೊಯ್ ಫೆರ್ನಾಂಡಿಸ್ ಮತ್ತು ಶರ್ವಿನ್ ಫೆರ್ನಾಂಡಿಸ್ ವಂದಿಸಿದರು.

p>

LEAVE A REPLY

Please enter your comment!
Please enter your name here