ಶ್ರೀ ವೀರಾಂಜನೇಯ ಸೇವಾ ಸಮಿತಿ ಸಂಸ್ಥೆಯಿಂದ ನಡೆದ ದಿನನಿತ್ಯ ಬಳಕೆಯ ನೆರವು ಕಾರ್ಯಕ್ರಮ

0

ಬೆಳ್ತಂಗಡಿ: ಬಡವರ ಸೇವೆಯೇ ನಮ್ಮ ಧ್ಯೇಯ ಎಂಬ ಧ್ಯೇಯ ವಾಕ್ಯವನ್ನು ಮುಂದಿಟ್ಟುಕೊಂಡು ಶ್ರೀ ವೀರಾಂಜನೇಯ ಸೇವಾ ಸಮಿತಿಯು 7 ವರ್ಷ ಪೂರೈಸಿ 8ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಲುವಾಗಿ ಜ.28ರಂದು ಶ್ರೀ ಮಾತ ಲಕ್ಷಣಿ ವ್ರದ್ಧಾಶ್ರಮ ಫರಂಗಿಪೇಟೆಯಲ್ಲಿ ದಿನನಿತ್ಯ ಬಳಕೆಯ ವಸ್ತುಗಳ ನೆರವು ಕಾರ್ಯಕ್ರಮ-2024 ಆಯೋಜಿಸಿದ್ದರು.ಅಲ್ಲಿನ ವೃದ್ಧಾಶ್ರಮಕ್ಕೆ 15,000ರೂ ಮೌಲ್ಯದ ಗ್ರೈಂಡರ್ ವಿತರಿಸಿದರು ಹಾಗೂ 3,500ರೂ ಮೌಲ್ಯದ ಡೈಪರ್ ಅನ್ನು ವಿತರಿಸಿದರು.

ನಂತರ ಸಮಾಜದಲ್ಲಿ ತಮ್ಮಂತೆಯೇ ಸಮಾಜಸೇವೆ ಮಾಡುವ ಆಯ್ದ 12 ಸಂಘಸಂಸ್ಥೆಗಳಿಗೆ ಗೌರವರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಅರ್ಜುನ್ ಬಂಡರ್ಕಾರ್, ಸ್ಪೂರ್ತಿ ವಿಶೇಷ ಶಾಲೆಯ ಸ್ಥಾಪಕಾಧ್ಯಕ್ಷ ಪ್ರಕಾಶ್ ಶೆಟ್ಟಿಗಾರ್ ಹಾಗೂ ಆಶ್ರಮದ ಸ್ಥಾಪಕಾಧ್ಯಕ್ಷ ಹರೀಶ್ ಪೆರ್ಗಡೆ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here