ಬೆಳಾಲು ಕೊಲ್ಪಾಡಿಯಲ್ಲಿ ಹದಿನೆಂಟು ದಿನಗಳ ಭಗವದ್ಗೀತೆ ತರಗತಿಯ ಸಮಾರೋಪ

0

ಬೆಳಾಲು: ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ ವತಿಯಿಂದ ಕಳೆದ ಸಪ್ಟಂಬರ ತಿಂಗಳಲ್ಲಿ ಆರಂಭಗೊಂಡ ಭಗವದ್ಗೀತೆಯ ತರಗತಿಯು, ಹದಿನಂಟು ತರಗತಿಗಳನ್ನು ಪೂರೈಸುವುದರೊಂದಿಗೆ ಮುಕ್ತಾಯಗೊಂಡಿತು.

ಕೊಲ್ಪಾಡಿ ಭಜನಾ ಮಂಡಳಿಯವರು ಪ್ರತೀ ಶನಿವಾರ ವಾರದ ಭಜನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಈ ಸಂದರ್ಭದಲ್ಲಿ ಸೇರುವ ಭಜಕರಿಗೆ ಭಗವದ್ಗೀತೆಯ ವಿಶೇಷ ತರಗತಿಯನ್ನು ಆಯೋಜಿಸಲಾಗಿತ್ತು.

ಭಗವದ್ಗೀತೆಯ ತರಗತಿಯನ್ನು ನಿರಂತರವಾಗಿ ಹಾಗೂ ಸಮರ್ಥ ಗುರುಗಳಾಗಿ ನಡೆಸಿಕೊಟ್ಟವರು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿಯವರು.

ಪ್ರತೀ ತರಗತಿಯಲ್ಲಿ ಒಂದು ಅಧ್ಯಾಯದ ಆಯ್ದ ಶ್ಲೋಕಗಳ ವಾಚನದ ಅಭ್ಯಾಸ ಹಾಗೂ ಸೂಕ್ಷ್ಮವಾಗಿ ಅರ್ಥ ವಿವರಣೆ.ಜೊತೆಗೆ ಪ್ರಧಾನವಾಗಿ ಮಹಾಭಾರತದ ಮತ್ತು ರಾಮಾಯಣದ ಕಥೆಗಳನ್ನು ಹೇಳಿಕೊಡಲಾಗುತ್ತಿತ್ತು. ಗುರುಗಳ ಸಮರ್ಥ ನಿರ್ವಹಣೆ, ಆಕರ್ಷಕ ವಿವರಣೆ, ಚಿಕ್ಕ ಮಕ್ಕಳಿಗೂ ಅರ್ಥ ಆಗುವ ಭಾಷೆ ಮತ್ತು ಪದ ಪ್ರಯೋಗ ತರಗತಿಯನ್ಧು ಅರ್ಥಪೂರ್ಣವಾಗಿಸಿತು.

ಈ ತರಗತಿಯ ಮೂಲಕ ಭಾರತದ ಸಂಸ್ಕೃತಿಯ, ಜೀವನ ಮೌಲ್ಯಗಳ ಪರಿಚಯ ಮತ್ತು ಪ್ರಸಾರದ ಕಾರ್ಯವನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯವರು ಶ್ರದ್ಧಾ ಭಕ್ತಿಯಿಂದ ನಡೆಸಿಕೊಟ್ಟಿದ್ದಾರೆ. ಮಂಡಳಿಯ ಅಧ್ಯಕ್ಷರಾದ ಸದಾಶಿವ ಮೈರಾಜೆ ಮತ್ತು ಸದಸ್ಯರೆಲ್ಲರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here