




ಕೊಯ್ಯೂರು: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆ, ಕೊಯ್ಯೂರು ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತಿಪೂರ್ವಕ ಕಾರ್ಯಕ್ರಮ ನಡೆಯಿತು.ಅನಂತಕೃಷ್ಣ ಭಟ್ ಪೂಜಾ ವಿಧಾನ ನೆರವೇರಿಸಿದರು.
ಎಲ್‌ಡಿ ಪರದೆಯ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆ ಮಾಡಲಾಗಿತ್ತು.ದೇವರಿಗೆ ವಿಶೇಷ ಪೂಜೆ ಭಜನೆ ಸೇವೆ ನಡೆದು ಅನ್ನಸಂತರ್ಪಣೆ ನಡೆಯಿತು.ಬಾಲಕೃಷ್ಣ ಪೂಜಾರಿ ಬಜ ಅವರು ಶ್ರೀರಾಮನ ಚರಿತ್ರೆಯನ್ನು ತಿಳಿಸಿದರು.ಕರಸೇವಕರನ್ನು ಗೌರವಿಸಲಾಯಿತು.


ದೇವಸ್ಥಾನದ ಅಡಳಿತ ಮೋಕ್ತೇಸರ ಕೆ.ಬಿ ಹರಿಶ್ಚಂದ್ರ ಬಲ್ಲಾಲ್, ಪ್ರಧಾನ ಅರ್ಚಕ ಅಶೋಕ್ ಕುಮಾರ್ ಭಾಂಗಿಣ್ಣಾಯ, ಕೊಯ್ಯೂರು ಭಜನಾ ಮಂಡಳಿ ಅಧ್ಯಕ್ಷ ದಿನೇಶ ಗೌಡ ಜಾನ್ಲಾಪು, ಭಾಸ್ಕರ ಎಸ್ ಕೋಟ್ಯಾನ್, ಗ್ರಾಮ ಪಂಚಾಯತ್ ಸದಸ್ಯೆ ವಿಶಾಲಾಕ್ಷಿ, ಭಾಗವಹಿಸಿದ್ದರು.
ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಿವಾಜಿ ಶಾಖೆ ಕೊಯ್ಯೂರು ಸದಸ್ಯರು ಉಪಸ್ಥಿತರಿದ್ದರು.ಯಶವಂತ್ ಗೌಡ ಪೂರ್ಯಾಳ ಕಾರ್ಯಕ್ರಮ ನಿರ್ವಹಿಸಿದರು.








