ಉಜಿರೆ: ಉಜಿರೆಯ ಅನುಗ್ರಹ ಶಿಕ್ಷಣ ಸಂಸ್ಥೆಗೆ, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಹಾಗು ಕಥೊಲಿಕ್ ವಿದ್ಯಾ ಮಂಡಳಿಯ ಅಧ್ಯಕ್ಷರು ಆದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹರವರು ಚರ್ಚ್ ಪಾಲನಾ ಭೇಟಿಯ ಸಮಯದಲ್ಲಿ ಅನುಗ್ರಹ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದರು.
ಶಾಲಾ ಸಂಚಾಲಕರಾದ ವಂ| ಪಾ. ಜೇಮ್ಸ್ ಡಿ ಸೋಜಾ ಹಾಗೂ ಪ್ರಾಂಶುಪಾಲರಾದ ವಂ| ಫಾ.ವಿಜಯ್ ಲೋಬೋರವರು ಸೇರಿರುವ ಎಲ್ಲರ ಜೊತೆಗೆ ಹಾರಾರ್ಪಣೆ ಮಾಡಿ ಸ್ವಾಗತಿಸಿ ಶಾಲಾ ಬ್ಯಾಂಡಿನ ಮೂಲಕ ಗೌರವಪೂರ್ವಕವಾಗಿ ಪೂಜ್ಯ ಬಿಷಪ್ರವರನ್ನು ಬರಮಾಡಿಸಿಕೊಂಡರು.ತದನಂತರ ಪೂಜ್ಯರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಶಾಲಾ ಸಭಾಭವನಕ್ಕೆ ಕರೆತರಲಾಯಿತು.
ಸಭಾಭವನದಲ್ಲಿ ನಡೆದ ಸಭಾಕಾರ್ಯಕ್ರಮವು ಮಕ್ಕಳ ಪ್ರಾರ್ಥನಾ ನೃತ್ಯದೊಂದಿಗೆ ಪ್ರಾರಂಭಗೊಂಡಿತು.ಸಂಸ್ಥೆಯು ಪ್ರಾರಂಭದಿಂದ ಈ ತನಕ ಸಾಧಿಸಿರುವ ಸಾಧನೆಗಳನ್ನು ಹಾಗೂ ಶಿಕ್ಷಣ ಸಂಸ್ಥೆಯ ಕಾರ್ಯಚಟುವಟಿಕೆಗಳ ವರದಿಯನ್ನು ಶಾಲಾ ಪ್ರಾಂಶುಪಾಲರಾದ ವಂ|ಪಾ. ವಿಜಯ್ ಲೋಬೋರವರು ಪ್ರಥಮ ಬಾರಿ ದೃಶ್ಯ ಮಾಧ್ಯಮದ ಮೂಲಕ ಪ್ರಸ್ತುತ ಪಡಿಸಿದರು.ತದನಂತರ ಪೂಜ್ಯ ಬಿಷಪ್ ರವರನ್ನು ವೇದಿಕೆಗೆ ಬರಮಾಡಿಸಿಕೊಳ್ಳಲಾಯಿತು. ಹಿರಿಯ ಶಿಕ್ಷಕರಾದ ಶ್ರೀ ಪ್ರಭಾಕರ ಶೆಟ್ಟಿಯವರು ಸ್ವಾಗತ ಭಾಷಣ ಮಾಡಿದರು . ಸಂಚಾಲಕರು ಪೂಜ್ಯ ಬಿಷಪ್‌ರವರಿಗೆ ಹೂ ಗುಚ್ಚ ನೀಡಿ ಗೌರವಿಸಿದರು.
ರಾಷ್ಟç ಮಟ್ಟದ ಸ್ಪೆಲ್‌ಬಿಯಲ್ಲಿ ರ‍್ಯಾಂಕ್ ಗಳಿಸಿದ ವಿರೋನ್ ಡಿಸೋಜ , ಸ್ವರೂಪ್ ಕೃಷ್ಣಾ ಹಾಗೂ ರಾಷ್ಟ್ರ ಮಟ್ಟದ ಕರಾಟಿ ಸ್ಪರ್ಧೆಯಲ್ಲಿ ವಿಜೇತರಾಗಿ ಅಂತರಾಷ್ಟಿçÃಯ ಮಟ್ಟಕ್ಕೆ ಆಯ್ಕೆಯಾದ ಮಹಮ್ಮದ್ ರಯ್ಯಾನ್ , ಮಹಮ್ಮದ್ ಫಾಝಿಮ್ ಹಾಗೂ ನಿಶಾನ್ ಪೂಜಾರಿ ಈ ಸಾಧಕರನ್ನು ಪೂಜ್ಯ ಬಿಷಪ್‌ರವರು ಅಭಿನಂದಿಸಿದರು.
ಬಿಷಪ್‌ರವರು ಆರ್ಶೀವಚನ ನೀಡುತ್ತಾ ತನ್ನನ್ನು ತಿದ್ದಿ ತಿದ್ದಿ ಉತ್ತಮ ಶಿಕ್ಷಣವನ್ನು ನೀಡಿರುವ ಶಿಕ್ಷಕರನ್ನು ಹಾಗೂ ಶಿಕ್ಷಣ ಸಂಸ್ಥೆಯನ್ನು ಸದಾ ಗೌರವದಿಂದ ನೋಡಿಕೊಂಡಾಗ ವಿದ್ಯಾರ್ಥಿಗಳು ಯಶಸ್ಸು ಕಾಣಲು ಸಾದ್ಯವೆಂದು ಹೇಳುತ್ತಾ ಅನುಗ್ರಹ ಶಿಕ್ಷಣ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಮುಕ್ತಮನಸ್ಸಿನಿಂದ ಶ್ಲಾಘಿಸಿ ಎಲ್ಲರನ್ನೂ ಹರಸಿದರು.
ವೇದಿಕೆಯಲ್ಲಿ ಪೂಜ್ಯರ ಜೊತೆಗೆ ಶಾಲಾ ಸಂಚಾಲಕರು, ಪ್ರಾಂಶುಪಾಲರು, ಪಾಲನ ಮಂಡಳಿ ಉಪಾಧ್ಯಕ್ಷ ಆಂಟನಿ ಫೆರ್ನಾಂಡಿಸ್, ವಂ| ಫಾ. ತ್ರಿಶಾನ್, ಲಿಗೋರಿ ವಾಸ್, ಶಾಲಾ ನಾಯಕರಾದ ಅಶ್ಮಿತಾ ಹಾಗೂ ಸ್ಮಯನ್ ಉಪಸ್ಥಿತರಿದ್ದರು.
ವಿನಯಲತಾರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡಿತು.
ತದನಂತರ ಅನುಗ್ರಹ ಶಿಕ್ಷಣ ಸಂಸ್ಥೆಯ ಎಲ್ಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳ ಜೊತೆಗೆ ಪೂಜ್ಯ ಬಿಷಪ್ ರವರು ಮುಕ್ತ ಸಂವಾದ ನಡೆಸಿ ಎಲ್ಲರ ಸೇವೆಗೆ ಸಂತೃಪ್ತಿಯನ್ನು ವ್ಯಕ್ತಪಡಿಸಿ ಎಲ್ಲರಿಗೂ ಶುಭಕೋರಿದರು.