ಜ.22: ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಜನಾ ಸೇವೆ, ಅನ್ನಸಂತರ್ಪಣೆ

0

ಮಚ್ಚಿನ: ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜ.22ರಂದು ಅಯೋಧ್ಯೆ ಶ್ರೀ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮನ ದಿವ್ಯ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಇಡೀ ವಿಶ್ವವೇ ಭಕ್ತಿಯಲ್ಲಿ ಪುನೀತರಾಗುವ ಪುಣ್ಯ ಕಾರ್ಯದಲ್ಲಿ ಬಳ್ಳಮಂಜ ಶ್ರೀ ಅನಂತೇಶ್ವರ ದೇವರಿಗೆ ವಿಶೇಷ ಪೂಜೆ, ಭಜನಾ ಸೇವೆ ಹಾಗೂ ಅನ್ನ ಸಂತರ್ಪಣೆ ಜರಗಲಿರುವುದು.

ಪೂರ್ವಹ್ನ ಘಂಟೆ 08 ರಿಂದ 09 ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ, ಘಂಟೆ 09 ರಿಂದ 10 ಶ್ರೀ ಅನಂತೇಶ್ವರ ಸ್ವಾಮಿ ಭಗಿನಿ ಭಜನಾ ಮಂಡಳಿ, ಘಂಟೆ 10 ರಿಂದ 11 ಶ್ರೀ ಅನಂತೇಶ್ವರ ಸ್ವಾಮಿ ಮಹಿಳಾ ಭಜನಾ ಮಂಡಳಿ, ಘಂಟೆ 11 ರಿಂದ 12 ಶ್ರೀ ಸಿದ್ದಿ ವಿನಾಯಕ ಭಜನಾ ಮಂಡಳಿ, ದತ್ತ ನಗರ ಕುತ್ತಿನ ತಂಡದಿಂದ ಭಜನಾ ಸೇವೆ ನಡೆಯಲಿದೆ ಹಾಗೂ ಅಯೋಧ್ಯೆಯ ಪ್ರತಿಷ್ಠಾ ಕಾರ್ಯಕ್ರಮದ ನೇರಪ್ರಸಾರವನ್ನು ಎಲ್.ಇ.ಡಿ ಪರದೆಯಲ್ಲಿ ನೋಡುವ ವ್ಯವಸ್ಥೆ ಮಾಡಲಾಗುವುದು ಎಂದು ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಹರ್ಷ ಸಂಪಿಗೆತ್ತಾಯ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here