ಕೆ.ಎನ್.ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವದ ಸಂಭ್ರಮ- ಸಾಧನೆ, ವ್ಯಕ್ತಿತ್ವ ಹೆಸರನ್ನು ಭವಿಷ್ಯಕ್ಕೂ ಉಳಿಸುತ್ತದೆ-ಶ್ರೀಪತಿ ಭಟ್

0

ಬೆಳ್ತಂಗಡಿ: ಮನುಷ್ಯನ ಸಾಧನೆ, ವ್ಯಕ್ತಿತ್ವ ಅವನ ಹೆಸರನ್ನು ಭವಿಷ್ಯಕ್ಕೂ ಉಳಿಸುತ್ತದೆ.ಕಾರ್ಯಕ್ರಮಕ್ಕೆ ಉತ್ತಮ ಸಂಘಟಕರು ದೊರೆತರೆ ಮಾತ್ರ ಸಾರ್ಥಕತೆಗೆ ಕಾರಣವಾಗುತ್ತದೆ.

ಈ ಕಾರ್ಯಕ್ರಮದ ಅಂಗವಾಗಿ ನಡೆದ 100 ಸನ್ಮಾನಗಳಿಗೆ ಅವರವರ ಸಾಧನೆಗಳನ್ನು ಗುರುತಿಸಿ ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಿರುವುದು ಶ್ಲಾಘನೀಯ.ಇಲ್ಲಿ ಯಾವುದೇ ರೀತಿಯ ಪೂರ್ವಾಗ್ರಹ ಇಲ್ಲದೆ ವ್ಯಕ್ತಿಗಳನ್ನು ಗುರುತಿಸಲಾಗಿದೆ ಎಂದು ಮೂಡಬಿದ್ರೆಯ ಉದ್ಯಮಿ ಕೆ.ಶ್ರೀಪತಿ ಭಟ್ ಹೇಳಿದರು.ಕಡಿರುದ್ಯಾವರದ ಕಿನ್ಯಡ್ಕದಲ್ಲಿ ಜರಗಿದ ಕೆ.ಎನ್.ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಾಧನೆಗೆ ಕಾರಣವಾಗುತ್ತದೆ-ಶೇಕ್ ಲತೀಫ್:
ಬೆಂಗಳೂರು ವಿ.ವಿ.ಯ ರಿಜಿಸ್ಟ್ರಾರ್ ಶೇಕ್ ಲತೀಫ್ ಮಾತನಾಡಿ ಏಕಾಗ್ರತೆಯಿಂದ ಮಾಡುವ ಕೆಲಸಗಳು ಸಾಧನೆಗೆ ಕಾರಣವಾಗುತ್ತವೆ. ಹಿರಿಯರ ಸಲಹೆ, ಸೂಚನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಕೊಡುಗೆಗಳು ಅಪಾರ-ಲೋಕೇಶ್ವರಿ ವಿನಯಚಂದ್ರ:
ಸರಸ್ವತಿ ಮಹಿಳಾ ಮಂಡಲದ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ಮಾತನಾಡಿ ಶಿರಾಡಿಪಾಲರ ಸಾಧನೆ ಎಲ್ಲರಿಗೂ ಮಾದರಿ. ಸಾಧನೆಯಿಂದ ಏನನ್ನೂ ಮಾಡಲು ಸಾಧ್ಯ ಎಂಬುದಕ್ಕೆ ಅವರು ಉತ್ತಮ ನಿದರ್ಶನ. ಸ್ವಂತಿಕೆಯಿಂದ ಬೆಳೆದ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರ ಎಂದರು.

ಕಿರುತೆರೆ ನಟ ರತ್ನಾಕರ ಮರಾಠೆ, ಮೈಸೂರಿನ ರಘುಪತಿ ತಾಮನ್ಕರ್, ಕಾರ್ಯಕ್ರಮ ಸಂಘಟಕ ಕೃಷ್ಣ ಕುಮಾರ್, ಶಬನಾ ಶೇಕ್ ಲತೀಫ್ ಮತ್ತು ಶಿರಾಡಿಪಾಲ್ ಕುಟುಂಬಸ್ಥರು ಉಪಸ್ಥಿತರಿದ್ದರು. ಕಿರಣ್ ಚಿಪ್ಲೂಣ್ಕರ್ ಸ್ವಾಗತಿಸಿದರು. ವಿಭಾ ಫಡಕೆ, ಇಂಚರಾ ಹೊಳ್ಳ ಮತ್ತು ನೂಪುರಾ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಕಾಮತ್ ಭಂಡಾಜೆ ಸಹಕರಿಸಿದರು. ಗಜೇಂದ್ರ ಗೊರಸುಕುಡಿಕೆ ವಂದಿಸಿದರು. ಪ್ರವೀಣ್ ಕಾರಂತ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೃತಿ ಬಿಡುಗಡೆ-ಸನ್ಮಾನ:
ಕಾರ್ಕಳದ ಅನುಪಮಾ ಚಿಪಳೂಣ್ಕರ್ ಅವರು ಬರೆದಿರುವ ಅಮ್ಮ', ನಿರಂಜನ ಪರಾಂಜಪೆ ಅನುವಾದಿಸಿರುವನಿಮ್ಮ ಸುಪ್ತ ಮನಸ್ಸಿನ ಶಕ್ತಿ’ ಮತ್ತು ಕೆ.ಎನ್.ಭಟ್ ಶಿರಾಡಿಪಾಲರು 1995ರಲ್ಲಿ ರಚಿಸಿದ ಕೃತಿ ನವನಿಧಿ’ ಪುಸ್ತಕಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು. ಕೆ.ಮಂಜುನಾಥ್ ಕಾಮತ್, ಕೊಳ್ತಿಗೆ ನಾರಾಯಣ ಗೌಡ, ಚಂದ್ರಶೇಖರ ಪೂಜಾರಿ, ವಸಂತಿ ಎನ್.ಗೌಡ, ವಸಂತಿ ವಿ.ಪ್ರಭು, ವಾಸುದೇವ ರಾವ್ ಕಕ್ಕೇನೇಜಿ, ಗೋಪಾಲ್ ಗೌಡ, ರಮಾನಂದ ಶರ್ಮ ಮತ್ತು ಅರವಿಂದ ಹೆಬ್ಬಾರ್‌ರವರನ್ನು ಸನ್ಮಾನಿಸಲಾಯಿತು. ಲೋಕೇಶ್ವರಿ ವಿನಯಚಂದ್ರ, ಶ್ರೀಕರ ಮರಾಠೆ, ವರದಾ ಪಿ.ನಾಯಕ್, ಭಾರತಿ ಹೆಬ್ಬಾರ್, ಬಾಲಕೃಷ್ಣ ಸಹಸ್ರಬುದ್ಧೆ, ರಾಮಕೃಷ್ಣ ಮಯ್ಯ, ಪ್ರಭಾಕರ ಶೆಣೈ ಮತ್ತು ನಾರಾಯಣ ಫಡಕೆರವರಿಗೆ ವಿಶೇಷ ಗೌರವಾರ್ಪಣೆ ಮಾಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಧರ್ಮಸ್ಥಳ ಮೇಳದ ಕಾಲಮಿತಿ ಯಕ್ಷಗಾನ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಕಡಿರುದ್ಯಾವರ ಶಾಲೆಯಲ್ಲಿ ಜರಗಿತು.

LEAVE A REPLY

Please enter your comment!
Please enter your name here