



ಕೊಕ್ಕಡ: ಸೌತಡ್ಕ ದೇವಸ್ಥಾನಕ್ಕೆ ಸಂಬಂಧಿಸಿದ ಕಡಿರ ನಾಗಬನದಲ್ಲಿ ನೂತನ ನಾಗನಕಟ್ಟೆಯ ಶಿಲಾನ್ಯಾಸ ಕಾರ್ಯಕ್ರಮವು ಜ.14ರಂದು ನಡೆಯಿತು.



ವೈದಿಕ ಕಾರ್ಯಕ್ರಮವನ್ನು ಕ್ಷೇತ್ರದ ಪ್ರಧಾನ ಅರ್ಚಕ ಸತ್ಯ ಪ್ರಿಯ ಕಲ್ಲೂರಾಯ, ಸುಬ್ರಹ್ಮಣ್ಯ ತೋಡ್ತಿಲ್ಲಾಯರು ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪಾಡಿ, ಸಮಿತಿಯ ಸದಸ್ಯರುಗಳು, ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯೆ ಮಲ್ಲಿಕಾ ಪಕಳ, ಶ್ರೀ ಪಿಲಿಚಾಮುಂಡಿ ದೈವಸ್ಥಾನ ಮಾಸ್ತಿಕಲ್ಲ ಮಜಲು ಆಡಳಿತ ಟ್ರಸ್ಟ್ ಇದರ ಅಧ್ಯಕ್ಷ ಕುಶಾಲಪ್ಪ ಗೌಡ ಪೋಡಿಕೇತ್ತೂರು, ಕ್ಷೇತ್ರದ ವಾಸು ತಜ್ಞರಾದ ಜಗನ್ನಿವಾಸ ರಾವ್, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಗ್ರಾಮದ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.








