ಪಣೆಜಾಲು: ನಾಗಚಾವಡಿ ಗುಂಪಲಾಜೆಯಲ್ಲಿ ಶ್ರೀ ನಾಗ-ರಕ್ತೇಶ್ವರಿ, ಪರಿವಾರ ದೈವಗಳ ದೇವಸ್ಥಾನ, ಕಟ್ಟೆಗಳಿಗೆ ಶಿಲಾನ್ಯಾಸ

0

ಪಣೆಜಾಲು-ಗುಂಪಲಾಜೆ: ಜ.14ರಂದು ಓಡಿಲ್ನಾಳ ಗ್ರಾಮದ ನಾಗಚಾವಡಿ, ಗುಂಪಲಾಜೆ ಎಂಬಲ್ಲಿ ನಾಗ-ರಕ್ತೇಶ್ವರಿ ಹಾಗೂ ಪರಿವಾರ ದೈವಗಳಿಗೆ ದೇವಸ್ಥಾನ, ಕಟ್ಟೆಗಳಿಗೆ ವೈದಿಕ ವಿಧಿ-ವಿಧಾನಗಳೊಂದಿಗೆ, ಗಣ್ಯರ ಉಪಸ್ಥಿತಿಯಲ್ಲಿ “ಶಿಲಾನ್ಯಾಸ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರ್ಮಿಕ ಮುಂದಾಳು, ಸಮಾಜಸೇವಕರು, ಕೊಡುಗೈ ದಾನಿಗಳಾದ ಶಶಿಧರ್ ಶೆಟ್ಟಿ “ನವಶಕ್ತಿ”, ಬರೋಡಾರವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಜನರು‌ ಭಕ್ತಿ, ಶ್ರದ್ದೆಯಿಂದ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಳ್ಳಿ, ಎಲ್ಲರಿಗೂ ಈ ಅವಕಾಶ ಸಿಗೋದಿಲ್ಲ, ಸಿಕ್ಕಿದ್ದು ನಿಮ್ಮೆಲ್ಲರ ಸೌಭಾಗ್ಯ, ನನ್ನ ಕಡೆಯಿಂದಲೂ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಗ-ರಕ್ತೇಶ್ವರಿ ಸೇವಾ ಟ್ರಸ್ಟ್ ನ ಅಧ್ಯಕ್ಷ, ಶಶಿರಾಜ್ ಶೆಟ್ಟಿಯವರು ಈ ಕ್ಷೇತ್ರ ಮುಂದಿನ ದಿನಗಳಲ್ಲಿ ಕಾರ್ಣಿಕದ ಕ್ಷೇತ್ರವಾಗಿ ನಮ್ಮ ಕಣ್ಣಾಮುಂದೆ ಬರಲಿದೆ.ಈ ಶುಭ ಕಾರ್ಯಕ್ಕೆ ಭಕ್ತಾದಿಗಳು ಸಾಮಾರ್ಥ್ಯಕನುಸಾರವಾಗಿ ದೇಣಿಗೆ ನೀಡುವುದರ ಮೂಲಕ ನಮ್ಮ ಜೋತೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಆನಂದ್ ಶೆಟ್ಟಿ ಐಸಿರಿಯವರು ಮಾತನಾಡಿ ಕಳೆದ ಎರಡು-ಮೂರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯ ಮಾಡಬೇಕೆಂದು ಭಕ್ತಾದಿಗಳು ಇಟ್ಟಂತಹ ಕನಸು ಇಂದು ನೆರವೇರುತ್ತಿದೆ.ವಿವಿಧ ರೀತಿಯಲ್ಲಿ ಭಕ್ತರು ಜೊತೆಗೂಡಿ ಸಹಕಾರ ನೀಡಬೇಕೆಂದು ವಿಜ್ನಾಪಣೆ ಮಾಡಿದರು.

ಮುಖ್ಯ ಅತಿಥಿಗಳಾಗಿ ರಾಜು ಶೆಟ್ಟಿ ಬೇಂಗ್ಯತ್ಯಾರ್, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ, ವಾಸ್ತುತಜ್ನರಾದ ರತ್ನಾಕರ ಭಟ್ ಸರಪಾಡಿ-ಮದ್ದಡ್ಕ, ಯತೀಶ್ ಕುಲಾಲ್ ಸಿರಿಮಜಲ್, ಕಿರಣ್ ಭಟ್ ಗುಂಪಲಾಜೆ, ಹಿರಿಯರಾದ ಎ.ಪೂವಪ್ಪ ಭಂಡಾರಿ,ಶಶಿಧರ ಶೆಟ್ಟಿ, ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಚಿದಾನಂದ ಇಡ್ಯ, ಹಿರಿಯರಾದ ಶಂಕರ್ ಗಾಣಿಗ ಗುಂಪಲಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ರಾಮ್ ಪ್ರಸಾದ್ ಎನ್.ಎಸ್, “ಸಮೃದ್ದಿ” ಗುಂಪಲಾಜೆ ಕಾರ್ಯಕ್ರಮ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.ಸಮಿಯಿಯ ಕೋಶಾಧಿಕಾರಿ ಪ್ರೇಮ್ ನಾಥ್ ಶೆಟ್ಟಿ, ರಂಜಿತ್ ಸಪಲ್ಯ, ಸತೀಶ್ ಗೌಡ, ಲೋಕೇಶ್ ಆಚಾರ್ಯ, ನೋಣಯ್ಯ ಗೌಡ, ಹರೀಶ್ ಗೌಡ, ಸತೀಶ್ ಕುಲಾಲ್ ನಾಗಚಾವಡಿ, ಶಶಿಧರ ಹೆಗ್ಡೆ, ಧನಂಜಯ ಶೆಟ್ಟಿ, ಚಂದ್ರಶೇಖರ ಕುಲಾಲ್, ಲೋಕೇಶ್ ಗೌಡ, ಆಶಾ, ಶಶಿಕಲಾ, ನಳಿನಿ, ರಮ್ಯ, ಗೋಪಿಕಾ, ದಿಶ್ಮಿತಾ ಮುಂತಾದವರು ಕಾರ್ಯಕ್ರಮಕ್ಕೆ ಸಹಕಾರಿಸಿದರು.

p>

LEAVE A REPLY

Please enter your comment!
Please enter your name here