


ಬೆಳಾಲು: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಬೆಳಾಲು ವತಿಯಿಂದ ಜ.6 ರಂದು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಚಾರ್ಮಾಡಿ ಕುಂಜಿರ ಗುರುಸ್ವಾಮಿಯವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.
ಬೆಳಿಗ್ಗೆ ಪಂದಳ ಗುಡಿ ಮುಹೂರ್ತ, ಶ್ರೀ ಅನಂತ ಪದ್ಮನಾಭಾ ದೇವರಿಗೆ ಹಾಲು ಪಾಯಸ, ಶಾಸ್ತಾರ ದೇವರಿಗೆ ಮೂಡಪ್ಪ ಸೇವೆ, ಅಮ್ಮನವರಿಗೆ ಗುಡಾನ್ನ ಪಾಯಸ, ಮಹಾಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಬೆಳಾಲು ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಬಳಿಯಿಂದ ಶ್ರೀ ಅನಂತಪದ್ಮನಾಭಾ ದೇವಸ್ಥಾನದವರೆಗೆ ಪಾಲುಕೊಂಬು ಮೆರವಣಿಗೆ ಕುಣಿತ ಭಜನೆಯೊಂದಿಗೆ ಸಾಗಿತು.ಬಳಿಕ ದೀಪರಾಧನೆ, ಗಣಪತಿ ಪೂಜೆ, ಪೀಠ ಪೂಜೆ , ರಾತ್ರಿ ಶ್ರೀ ಅನಂತೇಶ್ವರ ಭಜನಾ ಮಂಡಳಿ, ಶ್ರೀ ಅನಂತಪದ್ಮನಾಭಾ ಮಹಿಳಾ ಕುಣಿತ ಭಜನಾ ತಂಡ, ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿ ಮಾಯ ಇವರಿಂದ ಭಜನೆ, ರಾತ್ರಿ ಮಹಾ ಪೂಜೆ, ಅನ್ನ ಸಂತರ್ಪಣೆ, ಅಗ್ನಿ ಪ್ರತಿಷ್ಠಾಪನೆ, ದೇವಿ ದರ್ಶನ, ಸುಬ್ರಮಣ್ಯ ದರ್ಶನ, ಅಗ್ನಿ ಸೇವೆ ಮಹಾ ಪೂಜೆ ಜರಗಿತು.
ಬಳಿಕ ಮಂಗಳೂರು ಶ್ರೀ ಮಂಗಳದೇವಿ ಯಕ್ಷಗಾನ ಮಂಡಳಿಯಿಂದ ಮಣಿಕಂಠ ಮಹಿಮೆ ಮತ್ತು ಬೆಮ್ಮೆರೆ ಬರವು ಯಕ್ಷಗಾನ ಬಯಲಾಟ ನಡೆಯಿತು.
ಯಕ್ಷಮಿತ್ರ ಬಳಗ ಬೆಳಾಲು ಯಕ್ಷಗಾನವನ್ನು ನಿರ್ವಹಿಸಿದರು.
ಬೆಳಾಲು ಶ್ರೀ ಅಯ್ಯಪ್ಪ ಭಕ್ತ ವೃಂದದ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ, ಪ್ರಧಾನ ಕಾರ್ಯದರ್ಶಿ ಶಶಿಧರ ಆಚಾರ್ಯ, ಉಪಾಧ್ಯಕ್ಷ ಬೊಮ್ಮಣ್ಣ ಗೌಡ, ಸಂಚಾಲಕ ಗುರುಸ್ವಾಮಿ ಕೇಶವ ಟೈಲರ್, ಸುಧಾಕರ ಕೊಲ್ಪಾಡಿ, ಸೀತಾರಾಮ ಬಿ. ಎಸ್. ಸಮಿತಿಯ ಪದಾಧಿಕಾರಿಗಳು,ಸದಸ್ಯರು, ಅಯ್ಯಪ್ಪ ವೃತ್ತದಾರಿಗಳು ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.