ಉಜಿರೆ ಪಂಚಾಯತ್ ತ್ಯಾಜ್ಯ ನಿರ್ವಹಣಾ ಘಟಕ, ಗ್ರಂಥಾಲಯಕ್ಕೆ ಎನ್ನೆಸ್ಸೆಸ್ ಸ್ವಯಂ ಸೇವಕರ ಭೇಟಿ

0

ಉಜಿರೆ: ಉಜಿರೆ ಪಂಚಾಯತ್ ಇದರ ತ್ಯಾಜ್ಯ ಘಟಕವು ಅತ್ಯಂತ ವ್ಯವಸ್ಥಿತವಾಗಿ ಕಾರ್ಯ ಮಾಡುತ್ತಿದ್ದು, ಅಲ್ಲಿನ ತ್ಯಾಜ್ಯ ವಿಲೇವಾರಿ ನಿರ್ವಹಣೆಯ ಬಗ್ಗೆ ತಿಳಿಯಲು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಕಸ ಕೇವಲ ಕಸವಲ್ಲ-ರಸ ಎನ್ನುವ ತ್ಯಾಜ್ಯ ನಿರ್ವಹಣೆಯ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಭೇಟಿ ನೀಡಿದರು.

ಪ್ರಸ್ತುತ ರಿಪ್ಲಾಸ್ಟಿಕೊ ಎನ್ನುವ ಖಾಸಗಿ ಕಂಪನಿಯ ವತಿಯಿಂದ ಪ್ಲಾಸ್ಟಿಕ್ ಚೀಲ ಇತ್ಯಾದಿಗಳಿಂದ ಇಂಟರ್ ಲಾಕ್ ಟೈಲ್ಸ್ ಉತ್ಪಾದನೆ ಮಾಡಲಾಗುತ್ತಿದೆ.ಉಳಿದ ತ್ಯಾಜ್ಯಗಳನ್ನು ಬೇರ್ಪಡಿಸಿ ವಿವಿಧ ಉಪಯೋಗ ಪಡೆಯಲಾಗುತ್ತಿದೆ.ಹಸಿ ಕಸಗಳಿಂದ ಗೊಬ್ಬರ ಮಾಡಲಾಗುತ್ತಿದೆ.

ರಿಪ್ಲಾಸ್ಟಿಕೊ ಕಂಪೆನಿಯ ಪ್ರಬಂಧಕ ಕಾರ್ತಿಕ್ ಅವರು ಪ್ಲಾಸ್ಟಿಕ್ ತ್ಯಾಜ್ಯಗಳ ವಿಲೇವಾರಿ ಹಾಗೂ ಇಂಟರ್ ಲಾಕ್ ಟೈಲ್ಸ್ ಗಳ ತಯಾರಿಕೆಯ ವಿವಿಧ ಹಂತಗಳ ಮಾಹಿತಿ ನೀಡಿದರು.ಸಿಬಂದಿಗಳಾದ ಲೀಲಾ ಹಾಗೂ ಶುಭಾ ಅವರು ಸಹಕರಿಸಿದರು.

ಇದೇ ಸಂದರ್ಭದಲ್ಲಿ ಉಜಿರೆಯ ಪಂಚಾಯತ್ ನ ಗ್ರಂಥಾಲಯ ಹಾಗೂ ಕೂಸಿನ ಮನೆಗೆ ಭೇಟಿ ನೀಡಲಾಯಿತು.ಅಧ್ಯಕ್ಷೆ ಉಷಾಕಿರಣ ಕಾರಂತ್, ಉಪಾಧ್ಯಕ್ಷರಾದ ರವಿಕುಮಾರ್ ಬರಮೇಲು ಹಾಗೂ ಗ್ರಾಮಾಭಿವೃದ್ಧಿ ಅಧಿಕಾರಿ ಪ್ರಕಾಶ್ ನೊಚ್ಚ ಮಾರ್ಗದರ್ಶನ ಮಾಡಿದರು.

ರಾ.ಸೇ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಇವರ ನೇತೃತ್ವದಲ್ಲಿ ಘಟಕದ ನಾಯಕರಾದ ಸುದರ್ಶನ ನಾಯಕ್ ಹಾಗೂ ದಕ್ಷಾ ಕಾರ್ಯಕ್ರಮ ಸಂಘಟಿಸಿದರು.

ಸ್ವಯಂ ಸೇವಕಿ ಅಕ್ಷತಾ ಎಂ ಜಿ ನಿರೂಪಿಸಿದರು.ಸಮ್ಮೆದ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here