
ಕಲ್ಮಂಜ: ಯುವ ಬಿಲ್ಲವ ವೇದಿಕೆ ಅಕ್ಷಯನಗರ ನಿಡಿಗಲ್-ಕಲ್ಮಂಜ ಇದರ ಮಾಸಿಕ ಸಭೆಯು ಜ.1ರಂದು ಜಯಾನಂದ ಪೂಜಾರಿ ಇವರ ಮನೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.2024ನೇ ಸಾಲಿನ ಅಧ್ಯಕ್ಷರಾಗಿ ನಿರಂಜನ್ ಪೂಜಾರಿ ಹಾಗೂ ಕಾರ್ಯದರ್ಶಿಯಾಗಿ ರುಕೇಶ್ ಪೂಜಾರಿ ಕಲ್ಮಂಜ ಆಯ್ಕೆಯಾದರು.
ಈ ಸಂದರ್ಭದಲ್ಲಿ 2024ನೇ ವರ್ಷದ ಕ್ಯಾಲೆಂಡರ್ ನ್ನು ಸಂಘದ ಸದಸ್ಯರಾದ ರವಿ ಬಂಗೇರ ಮತ್ತು ಮನೆಯವರು ಎಲ್ಲಾ ಸದಸ್ಯರಿಗೆ ಕೊಡುಗೆಯಾಗಿ ನೀಡಿದರು.ಈ ಸಭೆಯ ಅಧ್ಯಕ್ಷತೆಯನ್ನು ಜಯಾನಂದ ಪೂಜಾರಿ ವಹಿಸಿಕೊಂಡಿದ್ದರು.ಅತಿಥಿಗಳಾಗಿ ಸಂಘದ ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ ಬಂಗೇರ ಹಾಗೂ ದಿನೇಶ್ ಪೂಜಾರಿ ಉಪಸ್ಥಿತರಿದ್ದರು.
ನಾರಾಯಣ ಬಂಗೇರ ಬಳ್ಳಿದಡ್ಡ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಪೂಜಾರಿ ಅಂಬಡೆದಡಿ ಸ್ವಾಗತಿಸಿ, ಅಶೋಕ್ ಪೂಜಾರಿ ಬಳ್ಳಿದಡ್ಡ ವಂದಿಸಿದರು.