
ಬೆಳ್ತಂಗಡಿ: ತಾಲೂಕಿನ ಪ್ರತಿಷ್ಟಿತ ಮೊಬೈಲ್ ಮಳಿಗೆ ಇಮೇಜ್ ಮೊಬೈಲ್ಸ್ ಬೆಳ್ತಂಗಡಿ ಹಾಗೂ ಉಜಿರೆ ಇದರ ಪ್ರಯೋಜತ್ವದ 2ನೇ ಆವೃತ್ತಿಯ ಐಫೋನ್ 13 ಲಕ್ಕಿ ಡ್ರಾ ಜ.1ರಂದು ಬೆಳ್ತಂಗಡಿಯ ಬಸ್ ನಿಲ್ದಾಣ ಮುಂಭಾಗದ ಸಾಂತೊಮ್ ಟವರ್ನಲ್ಲಿರುವ ಮಳಿಗೆಯಲ್ಲಿ ನಡೆಯಿತು.
2ನೇ ಆವೃತ್ತಿಯ ಇಫೋನ್ 13 ಲಕ್ಕಿ ಡ್ರಾ ವಿಜೇತ ಚೀಟಿಯನ್ನು ವೈದ್ಯ ಆಡಿ ರಂಜನ್ ಕುಮಾರ್ ರವರು ಎತ್ತಿದರು.ಲಕ್ಕಿ ಡ್ರಾ ವಿಜೇತ ಆಸಿಪ್ ಗುರುವಾಯನಕೆರೆ ಅವರಿಗೆ ಐಫೋನ್ 13 ನೀಡಲಾಯಿತು ಹಾಗೂ 5 ಆಕರ್ಷಕ ಬಹುಮಾನಗಳನ್ನು ನೀಡಲಾಯಿತು.
ಈ ಸಂದರ್ಭ ಇಮೇಜ್ ಗ್ರೂಪ್ ಮಾಲಕ ಹಸೈನಾರ್ ಎನ್.ಕೆ, ಏಮ್ ಎನ್ ಕಂಪ್ಯೂಟರ್ ಇದರ ಮಾಲಕರಾದ ಹೆರಾಲ್ಡ್, ಅನುಗ್ರಹ ಸಂಸ್ಥೆಯ ಮುಖ್ಯಸ್ಥ ಎಂ.ಜಿ ತಲ್ಹತ್, ಸ್ಪಂದನ ಲ್ಯಾಬ್ನ ಮೆಲ್ಬಿನ್, ವೀರ ಟೈಲರ್ಸ್ ನ ಅಬ್ದುಲ್ ಖಾದರ್ ಹಾಜರಿದ್ದರು.
ಸಾರ್ವಜನಿಕರ ಸಮ್ಮುಖದಲ್ಲಿ ಕೂಪನ್ ಡ್ರಾ ಮಾಡಲಾಯಿತು.ಬೆಳ್ತಂಗಡಿ ಇಮೇಜ್ ಮೊಬೈಲ್ ಬೆಳ್ತಂಗಡಿ ಇದರ ಮುಖ್ಯಸ್ಥ ಹರ್ಷದ್ ಸ್ವಾಗತಿಸಿದರು.ಉಜಿರೆ ಇಮೇಜ್ ಮೊಬೈಲ್ ಮುಖ್ಯಸ್ಥ ಅಝರುದ್ದೀನ್ ಕಾರ್ಯಕ್ರಮವನ್ನು ನಿರ್ವಹಿಸಿದರು.