ತುಳುನಾಡು ಪಂಚಾಂಗ ಕ್ಯಾಲೆಂಡರ್‌ ಬಿಡುಗಡೆ

0

ಬೆಳ್ತಂಗಡಿ: ಗ್ಲೋಬಲ್ ಮೀಡಿಯಾದ 2024 ರ ತುಳುನಾಡು ಪಂಚಾಂಗ ಕ್ಯಾಲೆಂಡರ್‌ನ್ನು ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದ ಡಾ.ಸುದೇಶ ಶಾಸ್ತಿ ಅವರು ಬಿಡುಗಡೆ ಮಾಡಿದರು.

ಕರ್ನಾಟಕ ರಾಜ್ಯದ ತುಳುನಾಡು ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಪ್ರಮುಖ ಯಾತ್ರಾ ಕೇಂದ್ರವಾಗಿದ್ದು ಅನೇಕ ಇತಿಹಾಸ ಪ್ರಸಿದ್ದ ಪೌರಾಣಿಕ ಶ್ರದ್ದಾಕೇಂದ್ರಗಳಾಗಿವೆ.2024ರ ಕ್ಯಾಲೆಂಡರನ್ನು ಶಿವನ ದೇವಸ್ಥಾನಗಳಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕರ್ಜೆ, ಉಡುಪಿ, ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ, ಪಾಣೆಮಂಗಳೂರು, ಬಂಟ್ವಾಳ, ಶ್ರೀ ಆದಿನಾಥೇಶ್ವರ ದೇವಸ್ಥಾನ, ಅದ್ಯಪಾಡಿ, ಮಂಗಳೂರು, ಮಹತೋಭಾರ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಬಾರಕೂರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಳಂಜ, ಬೆಳ್ತಂಗಡಿ, ಶ್ರೀ ಶರಭೇಶ್ವರ ದೇವರು ಶ್ರೀ ಶರವು ಮಹಾಗಣಪತಿ ದೇವಸ್ಥಾನ, ಮಂಗಳೂರು, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಕುಂಡಾವು, ಬಂಟ್ವಾಳ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕುಕ್ಕೆಹಳ್ಳಿ, ಉಡುಪಿ, ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ, ಉಡುಪಿ, ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನ, ತಣ್ಣೀರುಪಂತ, ಬೆಳ್ತಂಗಡಿ, ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ಕೋಟೇಶ್ವರ, ಕುಂದಾಪುರ, ಶ್ರೀ ಶಿಶಿಲೇಶ್ವರ ದೇವಸ್ಥಾನ, ಶಿಶಿಲ, ಬೆಳ್ತಂಗಡಿ ಇವುಗಳ ಮೂಲ ವಿಗ್ರಹದ ಅಲಂಕಾರವುಳ್ಳ ನೈಜ ಚಿತ್ರಣವನ್ನು ಹೊಂದಿದೆ.

ಈ ವಿಶೇಷ ಕ್ಯಾಲೆಂಡರ್‌ಗಳಿಗೆ ರಾಜ್ಯ ಹಾಗೂ ವಿದೇಶಗಳಲ್ಲಿ ಬೇಡಿಕೆ ಇದೆ.ಬಿಡುಗಡೆಯ ಸಂದರ್ಭದಲ್ಲಿ ಉದ್ಯಮಿ ಶರತ್ ಕುಮಾರ ಶೆಟ್ಟಿ, ಅರ್ಚಕರಾದ ಗಣೇಶ ಭಟ್, ಮೋನಾರ್ಕ ಸ್ಟುಡಿಯೋದ ರಮಾನಂದ ಪೈ ಮತ್ತು ಗ್ಲೋಬಲ್ ಮೀಡಿಯಾದ ದಿನೇಶ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here