ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಪ್ರಗತಿ ಸ್ವ-ಸಹಾಯ ಸಂಘ ಉದ್ಘಾಟನೆ

0

ಬೆಳ್ತಂಗಡಿ: ಡಿ.30 ರಂದು ಬೆಳ್ತಂಗಡಿ ಸಂಜಯನಗರದಲ್ಲಿ ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ಪ್ರಗತಿ ಸ್ವ-ಸಹಾಯ ಸಂಘವು ಉದ್ಘಾಟನೆಗೊಂಡಿತು.

ಸಂಘದ ಉಪಾಧ್ಯಕ್ಷೆ ಪ್ರೇಮರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಗೌರಿರವರು ದೀಪ ಬೆಳಗಿಸಿ ಸಂಘಕ್ಕೆ ಶುಭ ಹಾರೈಸಿದರು.ಬೆಳ್ತಂಗಡಿ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ) ಇದರ ಅಧ್ಯಕ್ಷೆ ಮಂಜುಳ ಜೋನ್ ರವರು ಸಂಘದ ಗುರಿ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕರ್ತರಾದ ಮಾರ್ಕ್ ಡಿಸೋಜರವರು ಮಾತನಾಡುತ್ತಾ, ದೀಪ ಎಲ್ಲರಿಗೂ ಬೆಳಕನ್ನು ನೀಡುತ್ತದೆ, ನಮ್ಮ ಸಂಘ ಕೂಡ ಅದೇ ರೀತಿಯಲ್ಲಿ ಪ್ರಜ್ವಲಿಸಿ, ಹೆಮ್ಮರವಾಗಿ ಬೆಳೆದು ಇತರರಿಗೂ ಮಾದರಿಯಾಗಬೇಕು ಎಂದು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here