ಮಡಂತ್ಯಾರು: ಆನೆಗುಂದಿ ಗುರುಸೇವಾ ಪರಿಷತ್ ಬೆಳ್ತಂಗಡಿ ತಾಲೂಕು ಇದರ ಆಯೋಜನೆಯಲ್ಲಿ ಪುರೋಹಿತರು, ಕೂಡುವಳಿಕೆ ಮೋಕ್ತೇಸರರು, ಜನಪ್ರತಿನಿಧಿಗಳು ಹಾಗೂ ಸಂಘಟನೆಗಳ ಪ್ರಮುಖರ ಉಪಸ್ಥಿತಿಯಲ್ಲಿ ಚಿಂತನ-ಮಂಥನ ಸಮಾವೇಶವು ಡಿ.24ರಂದು ಮಡಂತ್ಯಾರು ಗಾಯತ್ರಿನಗರ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.
ಸಮಾರೋಪ ಸಮಾರಂಭದಲ್ಲಿ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳಿಂದ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ, ಕಟಪಾಡಿ-ಪಡುಕುತ್ಯಾರು ಆಶೀರ್ವಚನ ನೀಡಿದರು.
ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಕೆಮ್ಮಣ್ಣು ಗಣೇಶ ಆಚಾರ್ಯ ಅಧ್ಯಕ್ಷತೆ ವಹಿಸಿದರು.
ಸಾಮಾಜಿಕ ಕಾರ್ಯಕರ್ತ ದಾಮೋದರ ಆಚಾರ್ಯ, ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಪ್ರಥಮ ಗೋಷಿಯಲ್ಲಿ ‘ವಿಶ್ವಬ್ರಾಹ್ಮಣ್ಯ ಉಳಿಸಿ ಬಳಸಿ ಬೆಳೆಸುವಲ್ಲಿ ಸವಾಲುಗಳು’ ಎಂಬ ವಿಷಯದ ಮೇಲೆ ವಕ್ತಾರರಾದ ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಹಾಗೂ ದ್ವಿತೀಯ ಗೋಷ್ಠಿಯಲ್ಲಿ ‘ಆದರ್ಶ ಮೋಕ್ತೇಸರ ಸಮಾಜದಗ್ರೇಸರ’ ಎಂಬ ವಿಷಯದಲ್ಲಿ ವಕ್ತಾರರಾದ ವೇದಾಧ್ಯಾಯೀ ವೇಲಾಪುರೀ ವಿಶ್ವನಾಥ ಶರ್ಮಾ, ಬೇಲೂರು ವಿಚಾರ ಮಂಡನೆಗೈದರು.
ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ ಎಂ.ಬಿ. ಆಚಾರ್ಯ, ಐ.ಲೋಲಾಕ್ಷ ಶರ್ಮಾ, ಪಡುಕುತ್ಯಾರು ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ಕಾರ್ಕಳ ಆಡಳಿತ ಮೊಕ್ತೇಸರ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ, ಶಿಲ್ಪಿ ರಾಮಚಂದ್ರ ಆಚಾರ್ಯ, ಉಮೇಶ ಆಚಾರ್ಯ ಕಾನರ್ಪ, ಗೌರವಾಧ್ಯಕ್ಷ ಸುಂದರಾಚಾರ್ಯ ಕುದ್ಯಾಡಿ, ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ ಎನ್.ಎಸ್. ಗುಂಪಲಾಜೆ, ವಿ.ಪ್ರಕಾಶ ಪುರೋಹಿತ್ ವೇಣೂರು, ಮಂಜುನಾಥ ಆಚಾರ್ಯ ಅಳದಂಗಡಿ, ಕೋಶಾಧಿಕಾರಿ ಹರಿಶ್ಚಂದ್ರ ಆಚಾರ್ಯ ಪಿಲಿಚಾಮುಂಡಿಕಲ್ಲು, ಉಪಾಧ್ಯಕ್ಷ ಸದಾನಂದ ಆಚಾರ್ಯ ಅಳದಂಗಡಿ, ಪುರುಷೋತ್ತಮ ಆಚಾರ್ಯ ಕನ್ನಾಜೆ ಮತ್ತಿತರರು ಉಪಸ್ಥಿತರಿದ್ದರು.
ಆನೆಗುಂದಿ ಗುರುಸೇವಾ ಪರಿಷತ್ ಸದಸ್ಯರು ಪಾಲ್ಗೊಂಡರು.ಮಂಜುನಾಥ ಆಚಾರ್ಯ ಅಳದಂಗಡಿ ಸ್ವಾಗತಿಸಿ ರಾಜೇಶ್ ಆಚಾರ್ಯ ಸವಣಾಲು ಮತ್ತು ರುಕ್ಮಯ್ಯ ಆಚಾರ್ಯ ಕನ್ನಾಜೆ ನಿರ್ವಹಿಸಿದರು.