ಕೊಯ್ಯೂರು ಸ.ಪ್ರೌ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಧನಂಜಯ.ಪಿ ಪಾಂಬೇಲು, ಕಾರ್ಯದರ್ಶಿಯಾಗಿ ಮೋಹನ್ ಕೆ.ಎಸ್

0

ಕೊಯ್ಯೂರು: ಸರಕಾರಿ ಪ್ರೌಢ ಶಾಲೆ ಕೊಯ್ಯೂರಿನ ಹಳೆ ವಿದ್ಯಾರ್ಥಿ ಸಂಘದ ನೂತನ ಗೌರವ ಅಧ್ಯಕ್ಷರಾಗಿ ಶಾಲಾ ಮುಖ್ಯ್ಯೋಪಾಧ್ಯಾಯ ರಾಧಾಕೃಷ್ಣ ತಚ್ಚಮೆ, ಅಧ್ಯಕ್ಷರಾಗಿ ಧನಂಜಯ ಪಿ ಪಾಂಬೇಲು, ಕಾರ್ಯದರ್ಶಿಯಾಗಿ ಮೋಹನ್ ಕೆ.ಎಸ್ ಕೊಯ್ಯೂರು ಅವರನ್ನು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಪ್ರೇಮ ನಾಗನೋಡಿ, ಜೊತೆ ಕಾರ್ಯದರ್ಶಿಯಾಗಿ ತೃಪ್ತಿ ಪಿ.ಜಿ, ಕ್ರೀಡಾ ಕಾರ್ಯದರ್ಶಿಯಾಗಿ ಚಂದ್ರಶೇಖರ ಮಾವಿನಕಟ್ಟೆ, ಕೋಶಾಧಿಕಾರಿಯಾಗಿ ಇಮ್ತಿಯಾಜ್ ಆದೂರ್ ಪೇರಲ್,
ಗೌರವ ಸಲಹೆಗಾರರಾಗಿ ಗೋವಿಂದ.ಎನ್ ನಿರಾರಿ, ಕಾರ್ಯಕಾರಣಿ ಸದಸ್ಯರಾಗಿ ಭರತ್ ಡೆಂಬುಗ, ನಿತಿನ್ ಕೊಯ್ಯೂರು, ರವಿ ಕಜೆ, ಮೋಹನ್ ಬಜ, ಅಕ್ಷಯ್ ಕಿನ್ಯೆಲು, ಸುಜೀತ್ ಕುಮಾರ್ ಉಗ್ರೋಡಿ, ನಿತೇಶ್ ಕೊಯ್ಯೂರು, ಚಂದ್ರಶೇಖರ ಬಾಯಿತರಡ್ದ ಕೊಯ್ಯೂರು, ಶ್ರಾವ್ಯ ಕೊಯ್ಯೂರು ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕಿ ಬೇಬಿ ಹಾಗೂ ಶಿಕ್ಷಕ ರಾಮಚಂದ್ರ ದೊಡ್ಡಮನಿ, ಪ್ರವೀಣ್ ಕುಮಾರ್ ಹಾಗೂ ನಿಕಟ ಪೂರ್ವ ಅಧ್ಯಕ್ಷ ಯತೀಶ್ ದಡ್ದು, ಕಾರ್ಯದರ್ಶಿ ಚಂದ್ರಶೇಖರ ಕೊಯ್ಯೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here