ಬೆಳಾಲಿನಲ್ಲಿ ರಬ್ಬರ್ ಪ್ರೊಡ್ಯೂಸರ್ಸ್ ಸೊಸೈಟಿ ಉದ್ಘಾಟನೆ

0

ಬೆಳಾಲು: ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬೆಳಾಲು ರಬ್ಬರ್ ಪ್ರೊಡ್ಯೂಸರ್ಸ್ ಸೊಸೈಟಿ ಡಿ.22 ರಂದು ಶುಭಾರಂಭಗೊಂಡಿತು.

ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಜಿ. ಭೀಡೆ ಉದ್ಘಾಟಿಸಿ ಶುಭ ಹಾರೈಸಿದರು.

ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪದ್ಮ ಗೌಡ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ರಬ್ಬರ್ ಬೋರ್ಡ್ ರೀಜಾನಲ್ ಕಚೇರಿಯ ರಬ್ಬರ್ ಪ್ರೊಡಕ್ಷನ್ ಕಮಿಷನರ್ ಶೀಜಾ ಟಿ. ಪಿ., ಅಸಿಸ್ಟೆಂಟ್ ಡೆವಲಪ್ಪ್ ಮೆಂಟ್ ಆಫೀಸರ್ ರೋಷನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಬೆಳಾಲು ರಬ್ಬರು ಪ್ರೊಡ್ಯೂಸರ್ಸ್ ಸೊಸೈಟಿ ಅಧ್ಯಕ್ಷ ದಾಮೋದರ ಗೌಡ ಸುರುಳಿ ಸ್ವಾಗತಿಸಿ, ಉಪಾಧ್ಯಕ್ಷ ವಿಜಯ ಗೌಡ ವಂದಿಸಿದರು.ಬೆಳಾಲು ಪ್ರಾ.ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಗೌಡ ನಿರೂಪಿಸಿದರು.

LEAVE A REPLY

Please enter your comment!
Please enter your name here