ಮೇಲಂತಬೆಟ್ಟು ದ.ಕ.ಜಿ.ಪಂ‌.ಸ.ಹಿ.ಪ್ರಾ.ಶಾಲೆಯ ಶತಮಾನೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭ

0

ಮೇಲಂತಬೆಟ್ಟು: ಇಲ್ಲಿನ ದ.ಕ.ಜಿ.ಪಂ‌.ಸ.ಹಿ. ಪ್ರಾ.ಶಾಲೆಯ ಶತಮಾನೋತ್ಸವದ ಸಂಭ್ರಮಾಚರಣೆಯ ಸಮಾರೋಪ ಸಮಾರಂಭವು ಮಾಜಿ ಶಾಸಕ ಕೆ‌. ವಸಂತ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಡಿ.23 ರಂದು ಶಾಲೆಯ ವಠಾರದ ದಿ| ಪಾಚು ಪೂಜಾರಿ ವೇದಿಕೆಯಲ್ಲಿ ನಡೆಯಿತು.

ಬೆಳ್ತಂಗಡಿಯ ಹೋಲಿ ರೆಡಿಮಾರ್ ಚರ್ಚ್ ನ ಫಾದರ್ ವಾಲ್ಟರ್ ಡಿಮೆಲ್ಲೊ ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷೆ ಜೆಸಿಂತಾ ಮೋನಿಸ್, ಮುಖ್ಯೋಪಾಧ್ಯಾಯೆ ರೂಪಾ ಎಂ.ಬಿ., ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ನೂಜೋಡಿ , ಎಸ್ ಡಿ ಎಮ್ ಸಿ.ಅಧ್ಯಕ್ಷ ಪ್ರವೀಣ್, ವಿದ್ಯಾರ್ಥಿ ನಾಯಕಿ ಪ್ರತೀಕ್ಷಾ, ಕೃಷಿಕ ಯುವಕ ಮಂಡಲದ ಅಧ್ಯಕ್ಷ ಜಗದೀಶ್, ಶಾಲಾ ಹಿರಿಯ ವಿದ್ಯಾರ್ಥಿ ಅಣ್ಣು ಪೂಜಾರಿ ಅಡ್ಕದಬೈಲು , ಶಾಲಾ ಹಿರಿಯ ವಿದ್ಯಾರ್ಥಿ ಆನಂದ ಆಚಾರ್ಯ, ಮೇಲಂತಬೆಟ್ಟು ನವೋದಯ ಯುವಕ ಮಂಡಲದ ಅಧ್ಯಕ್ಷ ವಸಂತ್ ಕುಲಾಲ್, ಮಾಜಿ ತಾ.ಪಂ. ಸದಸ್ಯೆ ಸುಮತಿ ಪ್ರಮೋದ್, ಎಸ್.ಕೆ.ಡಿ.ಆರ್.ಡಿ.ಪಿಯ ಸೇವಾ ಪ್ರತಿನಿಧಿ ಗುಣವತಿ, ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ದಮಯಂತಿ ಮತ್ತು ಶಾಲಾ ಹಿರಿಯ ವಿದ್ಯಾರ್ಥಿ ಗಿರೀಶ್ ಕುಮಾರ್ ವಡ್ಯಣೆ ಉಪಸ್ಥಿತರಿದ್ದರು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ ಸ್ವಾಗತಿಸಿದರು.ಸುಧಮಣಿ ಮತ್ತು ಗಿರೀಶ್ ಕುಮಾರ್ ನಿರೂಪಿಸಿದರು.

LEAVE A REPLY

Please enter your comment!
Please enter your name here