

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ, ಲಾಯಿಲ ವಲಯದ, ನಡ ಕಾರ್ಯಕ್ಷೇತ್ರದ ಧರ್ಣಪ್ಪ ಮಡಿವಾಳ ರವರಿಗೆ ಅನಾರೋಗ್ಯ ಕಾರಣ ಚಿಕಿತ್ಸೆಗಾಗಿ ಸಂಪೂರ್ಣ ಸುರಕ್ಷ ದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ ಖಾವಂದರು ವಿಶೇಷವಾಗಿ ಮಂಜೂರು ಮಾಡಿರುವ ರೂ 1,20,000/- ಮೊತ್ತದ ಮಂಜೂರಾತಿ ಪತ್ರ ಹಾಗೂ ಚೆಕ್ಕನ್ನು ತಾಲ್ಲೂಕು ಯೋಜನಾಧಿಕಾರಿ ಸುರೇಂದ್ರ ರವರು ವಿತರಿಸಿದರು.
ಈ ಸಂದರ್ಭದಲ್ಲಿ ಲಾಯಿಲ ವಲಯದ ಮೇಲ್ವಿಚಾರಕ ಸುಶಾಂತ್, ಕೃಷಿ ಅಧಿಕಾರಿ ರಾಮ ಕುಮಾರ, ಸೇವಾ-ಪ್ರತಿನಿಧಿಯಾದ ಶಕುಂತಲಾ, ಪುಷ್ಪ, ಜಯರಾಮ ಉಪಸ್ಥಿತರಿದ್ದರು.