

ಮಡಂತ್ಯಾರು: ICSE ರಾಷ್ಟ್ರ ಮಟ್ಟದ ಕ್ರೀಡಾ ಕೂಟ – 2023 ಪಸ್ತುತ ಪಡಿಸಿದ ಕರಾಟೆ ಸ್ಪರ್ಧೆಯು ಡಿ.17ರಂದು ಎಚ್.ಡಿ.ದೇವೆಗೌಡ ಸಮುದಾಯ ಭವನ ಕೆ.ಆರ್ ನಗರ ಮೈಸೂರಿನಲ್ಲಿ ನಡೆಯಿತು.
ಈ ಕರಾಟೆ ಸ್ಪರ್ಧೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಯಾದ ಫ್ಲಾಯಿಡ್ ಮಿಸ್ಕಿತ್ ರವರು ಕುಮಿತೆಯಲ್ಲಿ ದ್ವಿತೀಯ ಸ್ಥಾನ ಮತ್ತು ಕಟದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಹಾಗೂ 8ನೇ ತರಗತಿಯ ಮುಹಮ್ಮದ್ ಹಾಫಿಲ್, 6ನೇ ತರಗತಿಯ ಮಹಮ್ಮದ್ ಅಶ್ರಫ್, ಎಲ್ಟನ್ ಡಿಸೋಜ, 5ನೇ ತರಗತಿಯ ರಿಹ ಫಾತಿಮಾ, ಮನಸ್ವಿ, ಮತ್ತು ಹಂಶಿಕ್ ರವರು ಕಟದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇವರಿಗೆ ಕರಾಟೆ ತರಬೇತುದಾರ ವಸಂತ ಬಂಗೇರ ರವರು ತರಬೇತಿಯನ್ನು ನೀಡಿರುತ್ತಾರೆ.