ಬೆಳ್ತಂಗಡಿ: ಆತ್ಮ ಯೋಜನೆ ಕೃಷಿ ಇಲಾಖೆ, ತಾಲೂಕು ಕೃಷಿ ಸಮಾಜ ಹಾಗೂ ಜಿಲ್ಲಾ ಕೃಷಿ ಸಮಾಜ, ದಕ್ಷಿಣ ಕನ್ನಡ ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ರೈತ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮ ಡಿ.22 ರಂದು ಉತ್ಕೃಷ್ಠ ಬೆಳ್ತಂಗಡಿ ಎಸ್.ಸಿ.ಡಿ.ಸಿ.ಸಭಾಂಗಣದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ, ಕೃಷಿ ಸಮಾಜದ ಜಿಲ್ಲಾ ಪ್ರತಿನಿಧಿ ಪಿ.ಕೆ. ರಾಜು ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಮಹಾವೀರ್ ಜೈನ್, ಉಪಾಧ್ಯಕ್ಷೆ ಸುರೇಖಾ, ನಿರ್ದೇಶಕರುಗಳಾದ ವಿನಯ್ ಕುಮಾರ್, ಜಗದೀಶ್ ಹೆಗ್ಡೆ, ಜಿನೇಂದ್ರ ಕುಮಾರ್, ರುಕ್ಮಯ್ಯ ಪೂಜಾರಿ, ದಿನೇಶ್ ಗೌಡ, ರವೀಂದ್ರ ಪೂಜಾರಿ, ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ ಪುರಸ್ಕೃತ ಬಿ.ಕೆ.ದೇವ ರಾವ್, ಕಳಿಯ ಗ್ರಾ.ಪಂ ಅಧ್ಯಕ್ಷ ದಿವಾಕರ ಮೆದಿನ, ಮಚ್ಚಿನ ಗ್ರಾ.ಪಂ.ಅಧ್ಯಕ್ಷೆ ರುಕ್ಮಿಣಿ, ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ಟಿ.ಎಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಕೃಷಿಕರನ್ನು ಗೌರವಿಸಲಾಯಿತು.ಸಿಬ್ಬಂದಿ ನಿಶಾ ಬಳಗ ಪ್ರಾರ್ಥಿಸಿದರು.ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.