ರೋಟರಿ ಕ್ಲಬ್ ಮಡಂತ್ಯಾರ್ ಗೆ ಜಿಲ್ಲಾ ಗವರ್ನರ್ ಭೇಟಿ ಕಾರ್ಯಕ್ರಮ

0

ಮಡಂತ್ಯಾರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರೋಟರಿ ಕ್ಲಬ್ ಗಳಲ್ಲಿ ಒಂದಾದ ರೋಟರಿ ಕ್ಲಬ್ ಮಡಂತ್ಯಾರು ಗೆ ಜಿಲ್ಲಾ ಗವರ್ನರ್ ಮೇಜರ್ ಡೊನರ್.ಹೆಚ್.ಆರ್ ಕೇಶವ್ ರವರ ಅಧಿಕೃತ ಭೇಟಿ ಕಾರ್ಯಕ್ರಮ ಹಾಗೂ ಸಾರ್ವಜನಿಕ ಸಭೆ ದಿನಾಂಕ 21 ರಂದು ಸಾಯಂಕಾಲ 6.30 ಕ್ಕೆ ಮಡಂತ್ಯಾರಿನ ಪಾರೆಂಕಿ ಸಭಾ ಭವನದಲ್ಲಿ ನಡೆಯಲಿದೆ.

ಜಿಲ್ಲಾ ಗವರ್ನರ್ ಮೇಜರ್ ಡೊನರ್.ಹೆಚ್.ಆರ್ ಕೇಶವ್ ರವರಿಂದ ಮಡಂತ್ಯಾರಿನ ರೋಟರಿ ಕ್ಲಬ್ ವತಿಯಿಂದ ನಡೆದ ವಿವಿಧ ಸಮಾಜ ಮುಖಿ ಕಾರ್ಯಕ್ರಮ ಗಳ ವೀಕ್ಷಣೆ ಹಾಗೂ ಉದ್ಘಾಟನೆ ಸಮಾರಂಭ ನಡೆಯಲಿದೆ.

ಸಾಯಂಕಾಲ 6.30ಕ್ಕೆ ಮಡಂತ್ಯಾರಿನ ಪಾರೆಂಕಿ ಸಭಾಭವನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.ವಿವಿಧ ವಲಯಗಳಲ್ಲಿ ಗುರುತಿಸಿಕೊಂಡ ಸಾಧಕರಿಗೆ ಸನ್ಮಾನ ಹಾಗೂ ಇತರ ಚಟುವಟಿಕೆ ಗಳ ಫಲಾನುಭವಿಗಳಿಗೆ ಸಾಮಗ್ರಿ ಗಳ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

ಕ್ಲಬ್ ನ ಜಿ.ಎಸ್. ಆರ್ ಆದ ಪ್ರಕಾಶ್ ಕಾರಂತರು, ಸಹಾಯಕ ಗವರ್ನರ್ ರಾಘವೇಂದ್ರ ಭಟ್, ಶೃತಿ ಮಾಡ್ತಾ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕ್ಲಬ್ ನ ಅಧ್ಯಕ್ಷ ರೋ.ಪಿ.ಎಚ್.ಎಫ್ ಟಿ. ವಿ. ಶ್ರೀಧರ ರಾವ್, ಕಾರ್ಯದರ್ಶಿ ನಿತ್ಯಾನಂದ ಬಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here