ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ವಜ್ರಾಭರಣಗಳ ಉತ್ಸವ ‘ಗ್ಲೋ ಫೆಸ್ಟ್’ ಗೆ ಚಾಲನೆ

0

ಎಲ್ಲರಿಗೂ ಕೈಗೆಟಕುವ ಆಭರಣ ಇಲ್ಲಿದೆ- ವಿದ್ಯಾ ಗೌರಿ
ಗುಣಮಟ್ಟ, ನಂಬಿಕೆಯಲ್ಲಿ ಜಿ.ಎಲ್.ಆಚಾರ್ಯ ಪ್ರಸಿದ್ದಿ- ಸೀಮಾ ನಾಗರಾಜ್
ನಮ್ಮ ಕುಟುಂಬವೇ ಜಿ.ಎಲ್. ಗ್ರಾಹಕರು- ಸೀಮಾ ಆಳ್ವ
40 ವರ್ಷಗಳಿಂದ ನಾವು ಜಿ.ಎಲ್.ಗ್ರಾಹಕರು- ವಿಜಯ ನಾಯಕ್
ವಜ್ರ ದುಬಾರಿ ಎಂಬ ಭಾವನೆ ಕ್ರಮೇಣ ಕಡಿಮೆಯಾಗಿದೆ- ಜಿ.ಎಲ್.ಬಲರಾಮ ಆಚಾರ್ಯ

ಪುತ್ತೂರು: ಸುಳ್ಯ, ಕುಶಾಲನಗರ, ಹಾಸನದಲ್ಲಿ ಚಿನ್ನಾಭರಣದ ಮಳಿಗೆ ಹೊಂದಿರುವ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‌ನಲ್ಲಿ 2024ನೇ ಜ.15ರ ತನಕ ನಡೆಯುವ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ‘ಗ್ಲೋ ಫೆಸ್ಟ್’ ಗೆ ಡಿ.18ರಂದು ಚಾಲನೆ ನೀಡಲಾಯಿತು.2ಸಾವಿರಕ್ಕೂ ಮಿಕ್ಕಿ ವಿನ್ಯಾಸದ ಕಣ್ಮನ ಸೆಳೆಯುವ ವಜ್ರಾಭರಣಗಳ ಸಂಗ್ರಹದ ಗ್ಲೋ ಫೆಸ್ಟ್ ಅನ್ನು ಪ್ರತಿ ವರ್ಷದಂತೆ ನಾಲ್ವರು ಸಾಧಕ ಮಹಿಳೆಯರು ಉದ್ಘಾಟಿಸಿದರು.

ಸುಮಾರು ಮೂರು ತಲೆಮಾರುಗಳಿಂದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಗ್ರಾಹಕರಾಗಿರುವ ಭಜನಾ ಸಂಕೀರ್ತಣೆ ಸಹಿತ ಹಲವು ಧಾರ್ಮಿಕ ಕಾರ್ಯದಲ್ಲಿ ಸೇವೆ ನೀಡುತ್ತಿರುವ ವಿಜಯ ಆರ್ ನಾಯಕ್, ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷೆ ಮತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡಿರುವ ವಿದ್ಯಾ ಆರ್ ಗೌರಿ, ಪ್ರಗತಿ ಪರ ಕೃಷಿಕರಾಗಿರುವ ಸೀಮಾ ಆಳ್ವ, ಇನ್ನರ್‌ವೀಲ್ ಕ್ಲಬ್‌ನಲ್ಲಿ ತೊಡಗಿಸಿಕೊಂಡಿರುವ ನ್ಯಾಯವಾದಿ ಸೀಮಾ ನಾಗರಾಜ್ ಅವರು ಜೊತೆಯಾಗಿ ಗ್ಲೋ ಫೆಸ್ಟ್ ಅನ್ನು ಉದ್ಘಾಟಿಸಿದರು.

ಎಲ್ಲರಿಗೂ ಕೈಗೆಟಕುವ ಆಭರಣ ಇಲ್ಲಿದೆ:
ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರು ಮಾತನಾಡಿ ದಕ್ಷಿಣ ಕನ್ನಡ ಮಾತ್ರವಲ್ಲ ದೇಶ ವಿದೇಶಕ್ಕೆ ಹೆಸರುವಾಸಿಯಾಗಿರುವ ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್ ಮಳಿಗೆ ಅತ್ಯುತ್ತಮ ದರ, ಗುಣಮಟ್ಟ ಹಾಗು ವಿಭಿನ್ನ ಶೈಲಿಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ಇವತ್ತು ಗ್ಲೋ ಫೆಸ್ಟ್ ಮೂಲಕ ಕೈಗೆಟಕುವ ದರದಲ್ಲೂ ವಜ್ರದ ಆಭರಣ ಸಿಗುತ್ತದೆ ಎಂಬ ಅರಿವನ್ನು ಗ್ರಾಹಕರಿಗೆ ಪರಿಚಯಿಸಿದ್ದಾರೆ ಎಂದರು.

ಗುಣಮಟ್ಟ, ನಂಬಿಕೆಯಲ್ಲಿ ಜಿ.ಎಲ್.ಆಚಾರ್ಯ ಪ್ರಸಿದ್ದಿ:
ನ್ಯಾಯವಾದಿ ಸೀಮಾ ನಾಗರಾಜ್ ಅವರು ಮಾತನಾಡಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್ ಸಂಸ್ಥೆಯಲ್ಲಿ ಚಿನ್ನದ ಗುಣಮಟ್ಟ ಮತ್ತು ನಂಬಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಸಿಬ್ಬಂದಿಗಳ ನಗುಮೊಗದ ಸೇವೆ ಗ್ರಾಹಕರಿಗೆ ಆಭರಣ ಖರೀದಿಸುವಲ್ಲಿ ಪ್ರೋತ್ಸಾಹ ನೀಡುತ್ತಿದೆ. ಇಲ್ಲಿನ ಚಿನ್ನದ ಹೂಡಿಕೆಗೆ ಸಂಬಂಧಿಸಿ ಇರುವ ಸ್ವರ್ಣ ನಿಧಿ ಯೋಜನೆ ತುಂಬಾ ಪ್ರಯೋಜವಾಗಿದೆ. ನಾವು ನಾಲ್ಕು ಜನ ಮಕ್ಕಳು ನಮ್ಮ ಮದುವೆ ಆಭರಣ ಇಲ್ಲೇ ಖರೀದಿಸಿದ್ದು, ನನ್ನ ಗಂಡನ ಮನೆಯವರೂ ಕೂಡಾ ಹಲವು ವರ್ಷಗಳಿಂದ ಜಿ.ಎಲ್. ಸಂಸ್ಥೆಯ ಗ್ರಾಹಕರಾಗಿರುವುದು ನಂಬಿಕೆ ವಿಶ್ವಾಸಕ್ಕೆ ದೊಡ್ಡ ಹೆಜ್ಜೆಯಾಗಿದೆ ಎಂದರು.

ನಮ್ಮ ಕುಟುಂಬವೇ ಜಿ.ಎಲ್. ಗ್ರಾಹಕರು:
ಪ್ರಗತಿಪರ ಕೃಷಿಕರಾಗಿರುವ ಸೀಮಾ ಆಳ್ವ ಅವರು ಮಾತನಾಡಿ 40 ವರ್ಷಗಳ ಹಿಂದೆಯೇ ನಾವು ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನ ಗ್ರಾಹಕರಾಗಿದ್ದೇವೆ. ನನ್ನ ತಾಯಿಯ ವಿವಾಹಕ್ಕೂ ಇಲ್ಲಿಂದಲೇ ಚಿನ್ನಾಭರಣ ಖರೀದಿ ಮಾಡಿದ್ದರು. ನಮ್ಮ ಕುಟುಂಬವೇ ಇಲ್ಲಿನ ಗ್ರಾಹಕರು ಎಂದರು.

40 ವರ್ಷಗಳೀಂದ ನಾವು ಜಿ.ಎಲ್.ಗ್ರಾಹಕರು:
ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ವಿಜಯ ನಾಯಕ್ ಅವರು ಮಾತನಾಡಿ ನಾನು ವರ್ಷಕ್ಕೆ ಮೂರು ಸಲ ಜಿ.ಎಲ್.ಆಚಾರ್ಯ ಜ್ಯುವಲ್ಲರ‍್ಸ್‌ಗೆ ಬರುತ್ತೇನೆ. ನನ್ನ ಮೊಮ್ಮಕ್ಕಳ ಹುಟ್ಟಿದ ಹಬ್ಬ ಸಹಿತ ಹಲವು ಸಂದರ್ಭದಲ್ಲಿ ಇಲ್ಲಿಂದಲೇ ಆಭರಣ ಖರೀದಿಸುತ್ತಿದ್ದೇನೆ. ಕಳೆದ 40 ವರ್ಷಗಳಿಂದಲೂ ನಮ್ಮ ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್ ಚಿನ್ನದ ಸಂಬಂಧ ಉತ್ತಮವಾಗಿದೆ ಎಂದ ಜಿ.ಎಲ್. ಗ್ಲೋ ಫೆಸ್ಟ್‌ಗೆ ಶುಭ ಹಾರೈಸಿದರು.

ವಜ್ರ ದುಬಾರಿ ಎಂಬ ಭಾವನೆ ಕ್ರಮೇಣ ಕಡಿಮೆಯಾಗಿದೆ
ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನ ಆಡಳಿತ ಮಂಡಳಿತ ಅಧ್ಯಕ್ಷ ಜಿ.ಎಲ್.ಬಲರಾಮ ಆಚಾರ್ಯ ಅವರು ಮಾತನಾಡಿ ಕಳೆದ 11 ವರ್ಷಗಳಿಂದ ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಗ್ಲೋ ಫೆಸ್ಟ್ ಎಂಬ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸುತ್ತೇವೆ. ವರ್ಷದಿಂದ ವರ್ಷಕ್ಕೆ ಗ್ರಾಹಕರು ಹೆಚ್ಚಿನ ಸ್ಪಂಧನೆ ಲಭ್ಯವಾಗಿದೆ. ವಜ್ರ ಎಂಬುದು ಬಹಳ ದುಬಾರಿ, ಕೈಗೆ ಎಟಕ್ಕದು ಎಂಬ ಭಾವನೆ ಇವತ್ತು ಕ್ರಮೇಣ ಕಡಿಮೆ ಆಗಿದೆ. ಇವತ್ತು ಅತ್ಯಂತ ಸಣ್ಣ ವಜ್ರಗಳನ್ನು ಪೋಣಿಸಿ ಆಭರಣ ಮಾಡುವ ತಂತ್ರಜ್ಞಾನವಿದೆ. ಇದರಿಂದ ಸಾಮಾನ್ಯ ಗ್ರಾಹಕರಿಗೂ ವಜ್ರ ಖರೀದಿಗೆ ಸಾಧ್ಯವಾಗಿದೆ. ಇದರೊಂದಿಗೆ ಮದುಮಗಳ ಶೃಂಗಾರಕ್ಕೆ ಬೇಕಾದ ಎಲ್ಲಾ ಆಭರಣಗಳು ನಮ್ಮಲ್ಲಿ ವಿಭಿನ್ನ ಶೈಲಿಯಲ್ಲಿದೆ. ಗ್ಲೋ ಫೆಸ್ಟ್‌ನಲ್ಲಿ ಆಕರ್ಷಕ ರಿಯಾಯಿತಿ ದರ ನೀಡುತ್ತಿದ್ದೇವೆ. ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು. ಜಿ.ಎಲ್.ಬಲರಾಮ ಆಚಾರ್ಯ ಸ್ವಾಗತಿಸಿ, ಬಲರಾಮ ಆಚಾರ್ಯ ಅವರ ಪತ್ನಿ ರಾಜಿ ಬಲರಾಮ ಆಚಾರ್ಯ, ಸಂಸ್ಥೆಯ ಆಡಳಿತ ನಿರ್ದೇಶಕರಾದ ಸುದನ್ವ ಆಚಾರ್ಯ, ಲಕ್ಷ್ಮೀಕಾಂತ್ ಆಚಾರ್ಯ, ವೇದಾ ಲಕ್ಷ್ಮೀಕಾಂತ್ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ಸಂಸ್ಥೆಯ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ವಜ್ರಾಭರಣಗಳ ಸಂಗ್ರಹವಿದ್ದು ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ. ಗ್ಲೋ ಫೆಸ್ಟ್‌ನಲ್ಲಿ ವಜ್ರಾಭರಣ ಖರೀದಿ ಮೇಲೆ ಪ್ರತಿ ಕ್ಯಾರೆಟ್ ಗೆ ರೂ.6 ಸಾವಿರದ ವರೆಗೆ ರಿಯಾಯಿತಿ, ಆಯ್ದ ವಜ್ರಾಭರಣಗಳ ಪ್ರತಿ ಖರೀದಿ ಮೇಲೆ ರೂ. 7ಸಾವಿರದ ವರೆಗೆ ರಿಯಾಯಿತಿ ನೀಡಲಾಗುವುದು. ಗ್ಲೋ ವಜ್ರಾಭರಣಗಳ ಸಂಗ್ರಹಕ್ಕೆ ಬೈ ಬ್ಯಾಕ್ ಮತ್ತು ಎಕ್ಸೇಜೆಂಜ್ ಗ್ಯಾರಂಟಿಯನ್ನು ಸಂಸ್ಥೆ ದೃಡೀಕರಿಸುತ್ತದೆ. ಗ್ಲೋ ಫೆಸ್ಟ್‌ನಲ್ಲಿ ಗ್ರಾಹಕರಿಗೆ ವಜ್ರಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಈ ಆಫರ್ ಪುತ್ತೂರು ಹಾಗೂ ಸುಳ್ಯ ಮಳಿಗೆಗಳಲ್ಲಿ ಮಾತ್ರ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

2 ಸಾವಿರಕ್ಕೂ ಮಿಕ್ಕಿ ಡಿಸೈನ್‌ಗಳಲ್ಲಿ ವಜ್ರಾಭರಣಗಳ ಸಂಗ್ರಹ
ಮಕ್ಕಳ, ಮಹಿಳೆಯರ, ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸ
ವಜ್ರಾಭರಣಗಳ ಮೇಲೆ ಸಂಪೂರ್ಣ ಮಾಹಿತಿ
ಕೈಗೆಟಕುವ ದರದಲ್ಲೂ ವಜ್ರಾಭರಣಗಳು
ಪ್ರತಿ ಕ್ಯಾರೆಟ್‌ಗೆ ರೂ 6ಸಾವಿರ ತನಕ ರಿಯಾಯಿತಿ
ಆಯ್ದ ವಜ್ರಾಭರಣಗಳ ಪ್ರತಿ ಖರೀದಿ ಮೇಲೆ ರೂ 7ಸಾವಿರ ರಿಯಾಯಿತಿ

LEAVE A REPLY

Please enter your comment!
Please enter your name here