ಬೆಳ್ತಂಗಡಿ: ಸ್ತ್ರೀ ಸಂಘಟನೆ ಘಟಕದಿಂದ ಬೆಳ್ತಂಗಡಿ ಸಾರ್ವಜನಿಕ ಆರೋಗ್ಯ ಕೇಂದ್ರ, ವೃದ್ಧಾಶ್ರಮಕ್ಕೆ ಭೇಟಿ

0

ಬೆಳ್ತಂಗಡಿ: ಡಿ.10ರಂದು ಬೆಳ್ತಂಗಡಿ ಘಟಕದ ಸ್ತ್ರೀ ಸಂಘಟನೆಯ ಸದಸ್ಯರು ಬೆಳ್ತಂಗಡಿ ತಾಲೂಕಿನ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿರುವ ಎಲ್ಲಾ ರೋಗಿಗಳೊಂದಿಗೆ ಮಾತನಾಡಿ ಎಲ್ಲರಿಗೂ ಕ್ರಿಸ್ಮಸ್ ಪ್ರಯುಕ್ತ ಫಲಾರವನ್ನು ನೀಡಲಾಯಿತು ಹಾಗೂ ಬೆಳ್ತಂಗಡಿಯ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿರುವ ವೃದ್ಧರ ಕುಶಲೋಪಚಾರವನ್ನು ವಿಚಾರಿಸಿ ಫಲಾರವನ್ನು ನೀಡಲಾಯಿತು.

ಈ ಭೇಟಿಯ ಸಂದರ್ಭದಲ್ಲಿ ಬೆಳ್ತಂಗಡಿ ಹೊಲಿ ರೆಡಿಮಾರ್ ಚರ್ಚಿನ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಶ್ರೀ ಗಿಲ್ಬರ್ಟ್ ಪಿಂಟೋ, ಬ್ರದರ್ ಸೈಮನ್, ಸಂಚಾಲಕಿ ಪೌಲಿನ್ ರೇಗೊ,  ಸ್ತ್ರೀ ಸಂಘಟನೆ ವಲಯ ಅಧ್ಯಕ್ಷೆ ಗ್ರೇಸಿ ಲೋಬೋ ಸ್ತ್ರೀ ಸಂಘಟನೆ ಬೆಳ್ತಂಗಡಿ ಘಟಕ ಅಧ್ಯಕ್ಷೆ ಸಿಲ್ವಿಯ ಪಿಂಟೋ ಹಾಗೂ ಸ್ತ್ರೀ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದು, ಕಾರ್ಯವು ಯಶಸ್ವಿಯಾಗಲು ಸಹಕರಿಸಿದರು.

p>

LEAVE A REPLY

Please enter your comment!
Please enter your name here