ಡಿ.17: ಸೌತಡ್ಕದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವಾರ್ಷಿಕೋತ್ಸವ

0

ಬೆಳ್ತಂಗಡಿ: ಹಿರಿಯರ ಜೀವನವು ಕಾಲಹರಣವಾಗದೇ ಆತ್ಮಗೌರವದೊಂದಿಗೆ ಅವರಲ್ಲಿರುವ ಇಚ್ಚಾ, ಕ್ರಿಯಾ ಮತ್ತು ಜ್ಞಾನ ಶಕ್ತಿಗಳು ಸಮಾಜಕ್ಕೆ ಬಳಕೆಯಾಗಬೇಕು ಮತ್ತು ನಿರಾಶೆಯನ್ನು ಬಿಟ್ಟು ಆಶಾವಾದವನ್ನು ಹೊಂದುವಂತಗಾಬೇಕು ಎಂಬ ಉದ್ದೇಶದಿಂದ ಪ್ರತಿಷ್ಠಾನವನ್ನು ಪ್ರಾರಂಭಿಸಿ ಸಮಾಜ ಸೇವೆಗೈಯುತ್ತಿದೆ.

50 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಪ್ರತಿಷ್ಠಾನದ ಸದಸ್ಯರಾಗಿ ತಮ್ಮ ಕ್ಷೇತ್ರದ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶವಿದ್ದು . ಕಾಸರಗೋಡು ಮತ್ತು ದ.ಕ. ಜಿಲ್ಲೆಯ ಎಲ್ಲಾ ಕಾಲೂಕುಗಳಲ್ಲಿ ಘಟಕಗಳಿದ್ದು ಸೇವಾಕಾರ್ಯಗಳನ್ನು ನಡೆಸುತ್ತಿದೆ.

ಪ್ರತಿಷ್ಠಾನದ ದ್ವಿತೀಯ ವಾರ್ಷಿಕೋತ್ಸವವು ಡಿ.17ರಂದು ಶ್ರೀ ಕ್ಷೇತ್ರ ಸೌತಡ್ಕದ ಗಣೇಶ ಸಭಾಭವನದಲ್ಲಿ ಜರಗಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕಯ್ಯುರು ನಾರಾಯಣ ಭಟ್ ಹೇಳಿದರು.ಅವರು ಡಿ.11ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಎಡನೀರು ಮಠದ ಶ್ರೀ ಶ ಸಚ್ಚಿದಾನಂದ ಭಾರತಿ ಸ್ವಾಮೀಜಿ ಸಮಾರಂಭ ಉದ್ಘಾಟಿಸಲಿದ್ದು ಸೌತಡ್ಕ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ರಾವ್ ಯಂ.ಅಧ್ಯಕ್ಷತೆ ವಹಿಸಲಿದ್ದಾರೆ.ಕರ್ನಾಟಕ ಧಾರ್ಮಿಕ ಪರಿಷತ್ತಿನ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ ಅತಿಥಿಗಳಾಗಿದ್ದು ಭಾರತೀಯ ಜೀವ ವಿಮಾ ನಿಗಮದ ಬೆಳ್ತಂಗಡಿ ಶಾಖಾ ಮೇನೇಜರ್ ವಿ.ಎಸ್.ಕುಮಾರ್ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ರಾಜೇಂದ್ರ ಕಲ್ಲೂರಾಯ, ಕೆ. ಜಯರಾಮ ಶೆಟ್ಟಿ ಉಳ್ಳಾಲ ಮಾಜಿ ಶಾಸಕರು, ಬಾಹುಬಲಿ ಪ್ರಸಾದ್ ಮೂಡಬಿದಿರೆ, ವಸಂತ ಸುವರ್ಣ ಬೆಳ್ತಂಗಡಿ, ಡಾ. ರಂಗಯ್ಯ ಸುಳ್ಯ, ರಾಜಮಣಿ ರಾಮಕುಂಜ ಬಂಟ್ವಾಳ, ಮಧೂರು ಮೋಹನ ಕಲ್ಲೂರಾಯ, ಸುರೇಶ ಬೈಂದೂರ, ಉಮೇಶ ಶೆಣೈ ಯನ್. ಉಪ್ಪಿನಂಗಡಿ, ಬಿ.ಕೇಶವ ಶಬರಾಯ ಸೌತಡ್ಕ, ಯಂ. ವೈ. ರಾಮಕೃಷ್ಣ ಸೌತಡ್ಕ, ಶ್ರೀಮತಿ ವಿನೋದ ಕೆ. ಶೆಟ್ಟಿ ಸೌತಡ್ಕ, ಇವರಿಗೆ ಗೌರವಾರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪಟ್ಟಾಭಿರಾಮ ಸುಳ್ಯ ಇವರಿಂದ ಮಿಮಿಕ್ರಿ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘ, ಉಪ್ಪಿನಂಗಡಿ ಇವರಿಂದ ರಾಜಸೂಯಧ್ವರ ತಾಳಮದ್ದಳೆ ಜರಗಲಿದೆ ಎಂದರು.ಪ್ರತಿಷ್ಠಾನದಲ್ಲಿ 350 ಸದಸ್ಯರನ್ನು ಹೊಂದಿ ಎಲ್ಲಾ ತಾಲೂಕುಗಳಲ್ಲಿ ಘಟಕ ಹೊಂದಿ ವಿವಿಧ ಸಮಾಜ ಸೇವೆ ಮಾಡುತ್ತಿದೆ.ಮುಂದಿನ ಯೋಜನೆಯಾಗಿ ಆಶ್ರಮ, ಗೋಶಾಲೆ, ಗುರುಕುಲ ಮಾಧರಿಯ ಶಾಲೆ,5 ಜಿಲ್ಲೆಗಳ ವ್ಯಾಪ್ತಿಯ ಸಹಕಾರ ಸಂಘ ಪ್ರಾರಂಭ ಮಾಡುವ ಯೋಜನೆ ಇದೆ ಎಂದು ಅಧ್ಯಕ್ಷರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಎಂ.ಜಯರಾಮ ಭಂಡಾರಿ ಧರ್ಮಸ್ಥಳ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಬೆಳ್ತಂಗಡಿ ಘಟಕದ ಸಂಚಾಲಕ ವಸಂತ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ.ವೇದವ್ಯಾಸ ರಾಮಕುಂಜ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here