ನೇತ್ರಾವತಿಯಲ್ಲಿ ಅಪರಿಚಿತ ಶವ ಪತ್ತೆ

0

ಧರ್ಮಸ್ಥಳ: ನೇತ್ರಾವತಿಯ ಸ್ನಾನಘಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಡಿ.10 ರಂದು ಪತ್ತೆಯಾಗಿದೆ.

ನೇತ್ರಾವತಿ ನದಿಯಲ್ಲಿ ಜನರು ಸ್ನಾನ ಮಾಡುವ ವೇಳೆ ಶವ ನೀರಿನಲ್ಲಿ ತೇಲಿ ಬರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ವೃತ್ತ ವ್ಯಕ್ತಿ 40 ರಿಂದ 45 ವರ್ಷ ಪ್ರಾಯದವರೆಂದು ಅಂದಾಜಿಸಲಾಗಿದ್ದು, ಎರಡರಿಂದ ಮೂರು ದಿನದ ಹಿಂದೆ ನೀರಿಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಶವವನ್ನು ನದಿ ನೀರಿನಿಂದ ಮೇಲೆತ್ತಲು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಾದ ಅವಿನಾಶ ಭಿಡೆ, ರವೀಂದ್ರ ಉಜಿರೆ, ರಾಘವೇಂದ್ರ, ಶಶಿಕುಮಾರ್,ಧನ್ವಿ ಅಂಬುಲೆನ್ಸ್ ನ ಧನೇಶ್ ಮತ್ತಿತರರು ಪೊಲೀಸರೊಂದಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here