



ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟವು ಬ್ಯಾಂಡ್ ವಾಲಗ, ಪಥ ಸಂಚಲನ, ವಂದನೆ ಸ್ವೀಕಾರ, ಧ್ವಜಾರೋಹಣ ಕಾರ್ಯಕ್ರಮಗಳೊಂದಿಗೆ ಜರಗಿತು.
ರಾಷ್ಟ ಮಟ್ಟದ ಕ್ರೀಡಾಪಟು ನಿಶಾ ಬನಂದೂರುರವರು ಕ್ರೀಡಾಕೂಟವನ್ನು ಉದ್ಘಾಟಿಸಿ, ಮಾತನಾಡುತ್ತಾ ಕ್ರೀಡೆ ಎಲ್ಲರನ್ನೂ ಆಕರ್ಷಿಸುವ ಚಟುವಟಿಕೆ.ಕೆಲವರು ಸಾಧಕರಾಗುತ್ತಾರೆ.ಯಾರಿಗೆ ಯಶಸ್ಸು ಬೇಕೊ ಅವರಲ್ಲಿ ಶಿಸ್ತುಬದ್ಧತೆ, ಕಠಿಣ ನಿರ್ಧಾರ ಶಕ್ತಿ ಮತ್ತು ಬದ್ಧತೆ ಇರಬೇಕು ಎಂದು ಅನಿಸಿಕೆ ವ್ಯಕ್ತಪಡಿಸುತ್ತಾ ಮುಂದಿನ ದಿನಗಳಲ್ಲಿ ಬೆಳಾಲಿನಲ್ಲಿ ಕ್ರೀಡಾ ತರಬೇತಿಗಾಗಿ ಅಕಾಡೆಮಿಯನ್ನು ಶೀಘ್ರದಲ್ಲೆ ಸ್ಥಾಪಿಸಲಾಗುವುದು ಎಂದು ಘೋಷಿಸಿದರು.


ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ್ ಗೌಡ ಕೊಲ್ಲಿಮಾರ್, ಉಜಿರೆ ಶ್ರೀ ಧ ಮ ಆಂಗ್ಲ ಮಾಧ್ಯಮ ಶಾಲೆಯ ಬ್ಯಾಂಡ್ ಸೆಟ್ಟಿನ ನಿರ್ದೇಶಕರಾದ ಸುಭಾಶ್ ಹಾಗೂ ಶಿಕ್ಷಕ ಸಿಬ್ಬಂದಿಗಳೆಲ್ಲರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕು ಕೀರ್ತನಾ ಪ್ರತಿಜ್ಞಾವಿಧಿ ಬೋಧಿಸಿದರು.ಶಾರೀರಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಾನಂದರವರು ಸ್ವಾಗತಿಸಿದರು, ರವಿಚಂದ್ರ ಜೈನ್ ವಂದಿಸಿದರು.ಸುಮನ್ ಯು ಎಸ್ ರವರು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ನಿಶಾ ಬನಂದೂರುರವರನ್ನು ಶಾಲಾ ವತಿಯಿಂದ ಸನ್ಮಾನಿಸಿದರು.


 
            