ಧರ್ಮಸ್ಥಳ: ಚಂದ್ರಗಿರಿ ನಗರದಲ್ಲಿರುವ ಪೊಸೊಳಿಕೆ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ ಕಾರ್ಯಕ್ರಮವನ್ನು ಆಚಾರಿಸಲಾಯಿತು.
ಪುಟಾಣಿ ಅಧ್ವಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್ ಡಿ. ದೀಪ ಬೆಳಗಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕ್ಷೀರಭಾಗ್ಯ ಹಾಲಿನ ಡೈರಿ ಅಧ್ಯಕ್ಷ ದೇವಸ್ಯ ಟಿ ವಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲ, ಪಂಚಾಯತ್ ಸದಸ್ಯರಾದ ದಿನೇಶ್ ರಾವ್, ಸುಧಾಕರ ದೇವಾಡಿಗ, ಶ್ರಮಿಳಾ ಜೈನ್, ಮಾಜಿ ಅಧ್ಯಕ್ಷೆ ಜಯ ಮೋನಪ್ಪ ಗೌಡ, ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಎಚ್ ಮಂಜು, ಎಲ್ ಎಚ್ ವಿ ವಿಜಯಲಕ್ಷ್ಮಿ, ಆಯುಷ್ಮಾನ್ ಭಾರತ್ ಸಿಬ್ಬಂದಿ ಜ್ಯೋತಿ, ಜಮಾ ಉಗ್ರಾಣ ಮಾಜಿ ಮುತ್ಸದ್ದಿ ಹಾಗೂ ಕಲಾ ಪೋಷಕರಾದ ಬಿ ಭುಜಬಲಿ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ರೇವತಿ ಹಾಗೂ ಸರ್ವ ಸದಸ್ಯರು, ಆಶಾ ಕಾರ್ಯಕರ್ತೆಯರಾದ ಮಲ್ಲಿಕಾ, ಸುಜಾತ, ಧನಲಕ್ಷ್ಮೀ, ಜಯಂತಿ, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಮಕ್ಕಳ ಪೋಷಕರು, ಪುಟಾಣಿ ಮಕ್ಕಳು, ಸಹಾಯಕಿ ಬಾಗ್ಯ, ಈ ಸಂದರ್ಭದಲ್ಲಿ ಪುಟಾಣಿಗಳಾದ ಆರ್ಯನ್, ಆರಾಧ್ಯ ಪೋಷಕರಿಂದ ಅಂಗನವಾಡಿಗೆ ಪ್ಯಾನ್ ಹಾಗೂ ಬೇಬಿ ಶ್ರೇಯ ರವರ ಪೋಷಕರಿಂದ ಕುಡಿಯುವ ನೀರಿನ ಫಿಲ್ಟರನ್ನು ಕೊಡುಗೆಯಾಗಿ ನೀಡಿರುತ್ತಾರೆ.
ಪ್ರಾರ್ಥನೆಯನ್ನು ಸಂಧ್ಯಾ, ಅಂಗನವಾಡಿ ಕಾರ್ಯಕರ್ತೆ ಬಿಂದು ಸ್ವಾಗತಿಸಿದರು.ಆಶಾ ಅಶೋಕ್ ಧನ್ಯವಾದವಿತ್ತರು.