ಮಚ್ಚಿನ ಕುತ್ತಿನ ಶಾಲೆಯಲ್ಲಿ ಬೀಳ್ಕೊಡುಗೆ, ಮಕ್ಕಳ ಹಬ್ಬ

0

ಮಚ್ಚಿನ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುತ್ತಿನ ಇಲ್ಲಿ ನ.26ರಂದು ಶಾಲಾ ಮಕ್ಕಳಿಂದ ಮತ್ತು ಅಂಗನಾಡಿ ಮಕ್ಕಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ನಂತರ ಸಭಾ ಕಾರ್ಯಕ್ರಮ ನಡೆಯಿತು.ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗಾಧರ ಕುಲಾಲ್ ವಹಿಸಿದ್ದರು.

ಉದ್ಘಾಟನೆಯನ್ನು ಗ್ರಾ.ಪಂ.ಅಧ್ಯಕ್ಷೆ ರುಕ್ಮಿಣಿ ಹಾಗೂ ಅತಿಥಿಗಳು ನೆರವೇರಿಸಿದರು.

ಅತಿಥಿಗಳಾಗಿ ವಿಲ್ಮೆಂಟ್ ಸೆರಾವೋ ಶಿಕ್ಷಕರು ಸ.ಹಿ.ಪ್ರಾ ಶಾಲೆ ಓಡಿಳ್ನಾಳ, ಅನಿತಾ ರೇಷ್ಮಾ ಡಿಸೋಜಾ ಪ್ರಭಾರ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಣಂದೂರು, ರಾಘವೇಂದ್ರ ಪ್ರಭು ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಕುತ್ತಿನ, ಮಂಜುಳಾ ಶರ್ಮ ಸೇವಾ ಪ್ರತಿನಿಧಿ, ದಿನೇಶ್ ಕುಲಾಲ್ ಅಧ್ಯಕ್ಷರು ಸಿದ್ಧಿವಿನಾಯಕ ಭಜನಾ ಮಂಡಳಿ ಕುತ್ತಿನ, ಪರಮೇಶ್ವರ್ ಎಸ್.ಡಿ.ಎಂ.ಸಿ ಅಧ್ಯಕ್ಷರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಚ್ಚಿನ, ಧರ್ಣಪ್ಪ ಸಾಲಿಯಾನ್ ಅಧಿಕಾರಿಗಳು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಯ ಪೂಜಾರಿ ಅಧ್ಯಕ್ಷರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ, ಚಂದ್ರಶೇಖರ ಬಿ ಎಸ್ ಸದಸ್ಯರು ಗ್ರಾಮ ಪಂಚಾಯತ್ ಮಚ್ಚಿನ, ಪ್ರತಿಮಾ ಅಧ್ಯಕ್ಷರು ಅಂಗನವಾಡಿ ಕೇಂದ್ರ ಕುತ್ತಿನ, ಪ್ರತಿಭಾ ರೈ ಗ್ರಾಮ ಪಂಚಾಯತಿ ಸದಸ್ಯರು ಮಚ್ಚಿನ, ಚೇತನ ಸಿ ಆರ್ ಪಿ ಪುಂಜಾಲಕಟ್ಟೆ ಕ್ಲಸ್ಟರ್, ಕುಮಾರಿ ಸಮೃದ್ಧಿ ಶಾಲಾ ನಾಯಕಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿಯರಾದ ಅನಿತಾ ರೇಷ್ಮ ಡಿಸೋಜಾ ಮತ್ತು ವಿಲ್ಮೆಂಟ್ ಸೆರಾವೋ ಇವರನ್ನು ಗೌರವ ಪೂರ್ವಕವಾಗಿ ಬೀಳ್ಕೊಡಲಾಯಿತು.

ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಿಕ್ಷಕಿಯಾದ ಕುಮಾರಿ ಲೋಲಾಕ್ಷಿ ಇವರು ಸಂಯೋಜಿಸಿದರು.

ಅಂಗನವಾಡಿ ಕೇಂದ್ರದ ಮಕ್ಕಳ ಕಾರ್ಯಕ್ರಮಗಳನ್ನು ಶಿಕ್ಷಕಿಯಾದ ನವನೀತ ಮತ್ತು ಸಹಾಯಕಿಯಾದ ರೇಖಾ ಇವರು ಸಂಯೋಜಿಸಿದರು.

ಹಳೆ ವಿದ್ಯಾರ್ಥಿನಿಯದ ಕುಮಾರಿ ಸೌಜನ್ಯ ಸ್ವಾಗತಿಸಿದರು.

ಶಾಲಾ ಮುಖ್ಯ ಶಿಕ್ಷಕರಾದ ಲೋಕೇಶ್ ಇವರು ಪ್ರಸ್ತಾವಿಕ ನುಡಿಗಳನ್ನಾಡಿದರು.

ವರ್ಗಾವಣೆಗೊಂಡ ಶಿಕ್ಷಕರ ಅಭಿನಂದನಾ ಪತ್ರಗಳನ್ನು ಹಳೆ ವಿದ್ಯಾರ್ಥಿನಿಯದ ಕುಮಾರಿ ದೀಕ್ಷ ಹಾಗೂ ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷರಾದ ನೀತಾ ವಾಚಿಸಿದರು.ಹರೀಶ್ ಶೆಟ್ಟಿ ಮುದಲಡ್ಕ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಮಹೇಶ್ ನಾಯಕ್ ಮತ್ತು ಪುಷ್ಪರಾಜ ಇವರು ಶಾಲಾ ಆವರಣವನ್ನು ಕಾರ್ಯಕ್ರಮಕ್ಕೆ ಸಜ್ಜುಗೊಳಿಸಿದರು.ಕಾರ್ಯಕ್ರಮದ ಯಶಸ್ಸಿಗೆ ಹಳೆ ವಿದ್ಯಾರ್ಥಿಗಳು ಮತ್ತು ಪೋಷಕರು ಸಹಕರಿಸಿದರು.ಹಿರಿಯ ವಿದ್ಯಾರ್ಥಿಯಾದ ಪ್ರಭಾಕರ ಪೂಜಾರಿ ಇವರು ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here