ಬೆಳ್ತಂಗಡಿ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ಯಕ್ಷಸಂಭ್ರಮ ಡಿಸೆಂಬರ್ 2 ರಂದು ಸಂಜೆ 6 ಗಂಟೆಗೆ ಉಜಿರೆ ಶ್ರೀ ಜರ್ನಾದನ ಸ್ವಾಮಿ ದೇವಸ್ಥಾನ ರಥಬೀದಿಯಲ್ಲಿ ನಡೆಯಲಿದೆ.ವಿಶೇಷವಾಗಿ ಹತ್ತು ಮಹಿಶಾಸುರರ ಬಾಲಲೀಲೆಯ ಆಟಗಳೊಂದಿಗೆ ಸಭಾಪ್ರವೇಶ ಆಗಲಿದೆ.ಬಂಗಾರದ ಕೀರಿಟದಲ್ಲಿ ಶ್ರೀ ದೇವಿಯ ಪ್ರತ್ಯಕ್ಷದ ಸನ್ನಿವೇಶ, ಚಂಡ-ಮುಂಡರ ಅಬ್ಬರದ ಪ್ರವೇಶ, ಹಲವು ವಿಶೇಷ ವೈಭವದ ಸನ್ನಿವೇಶಗಳು, ಆಕರ್ಷಣೀಯ ವಿದ್ಯುತ್ ದೀಪಾ ಸಂಯೋಜನೆ, ವಿಶೇಷ ಹೂವಿನ ಅಲಂಕಾರದ ರಂಗಸ್ಥಳ ಆಗಲಿದೆ ಎಂದು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ತಿಳಿಸಿದರು.
ನ.28 ರಂದು ಲಯನ್ಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವೈಭವದ ಮೆರವಣಿಗೆ-ಪ್ರಶಸ್ತಿ ಪ್ರದಾನ- ಗೌರವ ಸನ್ಮಾನ: ಸಂಜೆ 5 ರಿಂದ ಉಜಿರೆ ಓಶಿಯನ್ ಪರ್ಲ್ನಿಂದ ಶ್ರೀ ಜರ್ನಾದನ ಸ್ವಾಮಿ ದೇವಸ್ಥಾನ ರಥಬೀದಿಯವರೆಗೆ ಭಜನಾತಂಡಗಳು, ಚೆಂಡೆ, ಬ್ಯಾಂಡ್, ಕೊಂಬು, ಸ್ಯಾಕ್ಸೋಫೋನ್, ಆಕರ್ಷಕ ಸುಡುಮದ್ದು, ವಿವಿಧ ವೇಷಭೂಷಣಗಳೊಂದಿಗೆ ವೈಭವದ ಮೆರವಣಿಗೆ ಜರುಗಲಿದೆ.ಅಷ್ಟೆ ಅಲ್ಲದೇ ವಿಶೇಷ ಖಾದ್ಯಗಳ ಭೋಜನ, ಯಕ್ಷಗಾನ ಕ್ಷೇತ್ರದಲ್ಲಿ ಭಾಗವತ ಮೋಹನ್ ಬೈಪಡಿತ್ತಾಯ ಹಾಗೂ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಮತ್ತು ಕೃಷಿ ಕ್ಷೇತ್ರದಲ್ಲಿ ಬಿ.ಕೆ.ದೇವರಾವದ ಅಮೈ ಮಿತ್ತಬಾಗಿಲು ಅವರಿಗೆ ಯಕ್ಷ ಸಂಭ್ರಮ-2023ರ ಪ್ರಶಸ್ತಿ ಪ್ರದಾನ ನಡೆಯಲಿದೆ.
ಶ್ರೀ ಲಕ್ಷ್ಮೀ ಗ್ರೂಪ್ ಉಜಿರೆಯ ಮೋಹನ್ ಕುಮಾರ್, ಭರತ್ ಕುಮಾರ್ ಉಜಿರೆ, ಅರ್ಚನಾ ರಾಜೇಶ್ ಪೈ ಉಜಿರೆ ಅವರನ್ನು ಸನ್ಮಾನಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಧ್ರುವ ಪಟ್ಲ ಘಟಕದ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ಬರೋಡ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪ್ರಿನ್‌ಸಿಪಾಲ್ ಸೆಕ್ರೆಟಿ ಪವರ್ ಡಿಪಾರ್ಟ್ಮೆಂಟ್ ಗರ್ವನ್‌ಮೆಂಟ್ ಆಫ್ ಜಮ್ಮು ಕಾಶ್ಮೀರದ ಹಿರಿಯಡ್ಕ ರಾಜೇಶ್ ಪ್ರಸಾದ್, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರಿನ ಡಾ.ಪ್ರಭಾಕರ್ ಭಟ್ ಕಲ್ಲಡ್ಕ, ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಮೂಡಬಿದ್ರೆಯ ಡಾ.ಎಂ.ಮೋಹನ್ ಆಳ್ವ, ಶ್ರೀ ಜರ್ನಾದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತೇಸರಾದ ಶರತ್‌ಕೃಷ್ಣ ಪಡುವೆಟ್ನಾಯ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹಾಗೂ ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ್ ಕಾರಂತ್ ಭಾಗವಹಿಸಲಿದ್ದಾರೆ ಎಂದರು.
ಉಪಾಧ್ಯಕ್ಷ ಉಮೇಶ್ ಕುಲಾಲ್ ಗುರುವಾಯನಕೆರೆ ಮಾತನಾಡಿ ವೈಶಿಷ್ಟತೆಯನ್ನು ತಿಳಿಸುವ ಕಾರ್ಯವಾಗುತ್ತಿದೆ.ಜಾತ್ರೆ ರೀತಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ.ಘಟಕದಿಂದ ದೇಣಿಗೆಯನ್ನು ನೀಡಲಾಗುತ್ತಿದೆ ಇದಕ್ಕೆ ಪೂರಕವಾಗಿ ದಾನಿಗಳು ಸಹಕರಿಸುತ್ತಿದ್ದಾರೆ.ಘಟಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ಆದರ್ಶ ಜೈನ್ ಗುರುವಾಯನಕೆರೆ, ಸಂಚಾಲಕ ಕಿರಣ್ ಕುಮಾರ್ ಜೈನ್‌ಪೇಟೆ ಹಾಗೂ ಸಹ ಸಂಚಾಲಕ ತುಕರಾಮ್ ಬಿ. ಬೆಳ್ತಂಗಡಿ ಉಪಸ್ಥಿತರಿದ್ದರು.