ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಸಮುದಾಯ ದಿನ- ಸುದ್ದಿ ಬಿಡುಗಡೆಯ ಹಿರಿಯ ವರದಿಗಾರ ಹೆರಾಲ್ಡ್ ಪಿಂಟೊ ಸೇರಿದಂತೆ ಸಾಧಕರಿಗೆ ಸನ್ಮಾನ

0

ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ನ.26ರಂದು ಸಮುದಾಯ ದಿನ ನಡೆಯಿತು.

ಮಂಗಳೂರಿನ ವ.ಫಾ.ಜೋಕಿಮ್ ಫೆರ್ನಾಂಡಿಸ್ ದಿವ್ಯ ಬಲಿ ಪೂಜೆ ಅರ್ಪಿಸಿ. ಸಂದೇಶ ನೀಡಿದರು.ನಂತರ ಅನುಗ್ರಹ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಚರ್ಚ್ ಧರ್ಮ ಗುರು ವ.ಫಾ.ಜೇಮ್ಸ್ ಡಿಸೋಜಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿದರು.ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವ.ವಿಜಯ್ ಲೋಬೊ, ದಯಾಳ್ ಭಾಗ್ ಆಶ್ರಮದ ಧರ್ಮ ಗುರು ಫಾ.ಪ್ರಕಾಶ್, ಉಜಿರೆ ಕಾನ್ವೆಂಟ್ ನ ಸುಪೀರಿಯರ್ ಸಿ.ವಲ್ಸ, ಪಾಲನಾ ಪರಿಷತ್ ಉಪಾದ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಆಯೋಗದ ಸಂಯೋಜಕಿ ಲವೀನಾ ಫೆರ್ನಾಂಡಿಸ್, ಸಮುದಾಯ ಸಂಯೋಜಕ ರೋಷನ್ ಡಿಸೋಜಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸಂಘದಿಂದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಪುರಸ್ಕೃತ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವ. ವಿಜಯ್ ಲೋಬೊ, ಸುದ್ದಿ ಬಿಡುಗಡೆಯಲ್ಲಿ 24ವರ್ಷ ಸೇವೆ ಸಲ್ಲಿಸಿದ ಹಿರಿಯ ವರದಿಗಾರ ಹೆರಾಲ್ಡ್ ಪಿಂಟೊ, ಭೂಸೇನೆಯಲ್ಲಿ ಸುಬೇದಾರ್ ಹುದ್ದೆಯಲ್ಲಿ ನಿವೃತ್ತ ಮೆಲ್ವಿನ್ ಫೆರ್ನಾಂಡಿಸ್, ಡಾಕ್ಟಾರೆಟ್ ಪದವಿ ಪುರಸ್ಕೃತ ವೇರೀನ ರೊಡ್ರಿಗಸ್, ಕ್ಲಿಂಟನ್ ಡಿಸೋಜಾ, ಉರಗ ಪ್ರೇಮಿ ಸ್ನೇಕ್ ಜೋಯ್, ಸಮಾಜ ಸೇವಕ ಹಳ್ಳಿ ಮನೆ ಪ್ರವೀಣ್ ಫೆರ್ನಾಂಡಿಸ್, ಪಾಲನಾ ಪರಿಷದ್ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಉಜಿರೆ ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ವಿಜೇತರಾದ ಅನಿಲ್ ಪ್ರಕಾಶ್ ಡಿಸೋಜಾ, ಬೆಳಲಿನ ಪ್ರವೀಣ್ ವಿಜಯ್ ಡಿಸೋಜಾ, ಸಿ. ಎ. ಪರೀಕ್ಷೆಯಲ್ಲಿ ಉತ್ತೀರ್ಣ ಜಾನ್ ಡಿಸೋಜಾ, ಮಾಜಿ ಕಾರ್ಯದರ್ಶಿ ನಿತಿನ್ ಮೋನಿಸ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

11ವಾಳೆ ಯ ಗುರಿಕಾರರು, ಕನ್ಯಾ ಮರಿಯಮ್ಮ ಹಬ್ಬಕ್ಕೆ ತೆನೆ ಒದಗಿಸಿ ಕೊಟ್ಟ ಸೆಬಾಸ್ಟಿಯನ್, ನ.5ರಂದು ನಡೆದ ವಿವಿಧ ಸ್ಪರ್ಧೆಗಳು ಏರ್ಪಡಿಸಲಾಗಿತ್ತು.ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಸಹಕರಿಸಿದ ರೋಷನ್ ಡಿಸೋಜಾ, ವಲೇರಿಯನ್ ಡಿಸೋಜ, ಗ್ರೆಗ್ ಮೆಲ್ಸ್ಟಾರ್ ಇವರನ್ನು ಅಭಿನಂದಿಸಲಾಯಿತು.ಕ್ಯಾಥೋಲಿಕ್ ಸಭಾ ದಿಂದ ನಡೆಸಿದ ಭಾಷಣ ಸ್ಪರ್ಧೆ ಮತ್ತು ಪ್ರತಿಭಾ ಪುರಸ್ಕಾರ ನಡೆಯಿತು.

ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್ ಸ್ವಾಗತಿಸಿ, ಕಾರ್ಯದರ್ಶಿ ಲಿಗೋರಿ ವಾಸ್ ವರದಿ ಮಂಡಿಸಿದರು. ಫಾತಿಮಾ ವಾಳೆಯ ಗುರಿಕಾರ ಸಂತೋಷ್ ಮೆಲ್ವಿನ್ ಡಿಸೋಜಾ ಮತ್ತುಅನುಗ್ರಹ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಐರಿನ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

LEAVE A REPLY

Please enter your comment!
Please enter your name here