ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವವರ ಕಾಲೇಜು (ಸ್ವಾಯತ್ತ), ಕನ್ನಡ ವಿಭಾಗ, ಡಾ|ಹಾಮಾನಾ ಸಂಶೋಧನಾ ಕೇಂದ್ರ, ಉಜಿರೆ ಹಾಗೂ ಭಾಷಾಂತರ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಭಾಷಾಂತರಕಾರರ ಒಕ್ಕೂಟ ಸಹಯೋಗದಲ್ಲಿ ಭಾಷಾಂತರಕಾರರ ತೃತೀಯ ಸಮಾವೇಶ ನ.22 ಮತ್ತು 23, 2023ರಂದು ಕನ್ನಡ ಸಾಂಸ್ಕೃತಿಕ ಸಂವರ್ಧನೆ ಮತ್ತು ಭಾಷಾಂತರಕಾರರು ಎಂಬ ವಿಷಯದ ಮೇಲೆ ಸಿದ್ಧವನ ಗುರುಕುಲದಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.
ವಿಚಾರ ಸಂಕಿರಣವನ್ನು ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲಿದ್ದು, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ|ಡಿ.ವಿ.ಪರಮ ಶಿವಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ|ಎಂ.ಮೋಹನ್ ಆಳ್ವ ಮುಖ್ಯ ಅತಿಥಿಗಳಾಗಿ ಭಾವಹಿಸಲಿದ್ದಾರೆ.
ವಿಚಾರ ಸಂಕಿರಣದಲ್ಲಿ ಒಟ್ಟು ಆರು ಗೋಷ್ಠಿಗಳು ನಡೆಯಲಿದ್ದು. ದೇಶದ ವಿವಿಧ ಭಾಗಗಳಿಂದ ಸಂಪನ್ಮೂಲ ಪರಿಣಿತರು ಆಗಮಿಸಲಿದ್ದಾರೆ. ನ.೨೨ ಸಂಜೆ ೬ಗಂಟೆಗೆ ಉಜಿರೆ ಅಶೋಕ್ ಭಟ್ ಅವರ ನಿರ್ದೇಶನದಲ್ಲಿ ಅಮೃತ ಸಂಜೀವನಿ ಎಂಬ ಯಕ್ಷಗಾನ ತಾಳಮದ್ದಳೆ ಪ್ರಸಂಗ ನಡೆಯಲಿದೆ.
ನ.23ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಪ್ರಸಿದ್ದ ವಿದ್ವಾಂಸರಾದ ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿಯ ಕಾರ್ಯದರ್ಶಿಗಳಾಗಿದ್ದ ಪ್ರೊ.ಅಗ್ರಹಾರ ಕೃಷ್ಣಮೂರ್ತಿ ಸಮಾರೋಪ ಭಾಷಣ ಮಾಡಲಿದ್ದಾರೆ. ಪ್ರಾಂಶುಪಾಲ ಡಾ|ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ|ಬಿ.ಎ.ಕುಮಾರ ಹೆಗ್ಡೆ ಹಾಗೂ ಕ.ವಿ.ವಿ. ಭಾಷಾಂತರ ಅಧ್ಯಯನದ ವಿಭಾಗದ ಮುಖ್ಯಸ್ಥರಾದ ಡಾ|ಎ.ಮೋಹನ ಕುಂಟಾರ್ ಅವರು ತಿಳಿಸಿದ್ದಾರೆ.