ತಾಲೂಕು ಮಟ್ಟದ ಭಗವದ್ಗೀತಾ ಅಭಿಯಾನ- ಶ್ರೀ ಮಂ.ಅ.ಪ್ರೌ.ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಮಂಗಳೂರು ಸಂಸ್ಕೃತ ಸಂಘ, ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಸಮಿತಿ, ಜಿಲ್ಲಾ ಶ್ರೀ ಮದ್ಭವದ್ಗೀತಾ ಅಭಿಯಾನ ಸಮೀತಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು, ಯಕ್ಷಭಾರತಿ ಕನ್ಯಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜು ಉಜರೆ ಇಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ “ಭಗವದ್ಗೀತಾ ಅಭಿಯಾನದಲ್ಲಿ -2023” ಈ ಕಾರ್ಯಕ್ರಮದಲ್ಲಿ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯ ಕುಮಾರಿ ತ್ರಿವೇಣಿ ಇವಳು ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಕು.ಭವಿಷ್- ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಮುಖ್ಯೋಪಾಧ್ಯಾಯರಾದ ಪದ್ಮರಾಜು ಎಂ ಇವರ ಮಾರ್ಗದರ್ಶನದಲ್ಲಿ ಸಂಸ್ಕೃತ ಭಾಷಾ ಶಿಕ್ಷಕಿ ಹೆಗಡೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿರುತ್ತಾರೆ.

LEAVE A REPLY

Please enter your comment!
Please enter your name here