ಕೊಕ್ಕಡ: ಶ್ರೀ ಲಕ್ಷ್ಮೀ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಮಳಿಗೆ ಉದ್ಘಾಟನೆ

0

ಕೊಕ್ಕಡ: ಶ್ರೀ ರಾಮ ಭಜನಾ ಮಂದಿರದ ಹತ್ತಿರದ ಕಪಿಲಾ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭವಾಗಿರುವ ಶ್ರೀ ಲಕ್ಷ್ಮೀ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಇದರ ಉದ್ಘಾಟನೆ ನ.20 ರಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ರವರ ಅಮೃತ ಹಸ್ತದಿಂದ ನೆರವೇರಿತು.

ಈ ಸಂಧರ್ಭದಲ್ಲಿ ಕೊಕ್ಕಡ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬಾಲಕೃಷ್ಣ ನೈಮಿಷ, ಡಾ|| ಗಣೇಶ್ ಪ್ರಸಾದ್ (ಅಂಬಿಕಾ ಕ್ಲಿನಿಕ್ ಕೊಕ್ಕಡ), ಕೊಕ್ಕಡ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಯೋಗಿಶ್ ಆಲಂಬಿಲ, ಉಪಾಧ್ಯಕ್ಷರಾದ ಪ್ರಭಾಕರ ಗೌಡ ಮಲ್ಲಿಗೆಮಜಲು, ಪುರುಷೋತ್ತಮ (ಲಕ್ಷ್ಮೀ ಎಲೆಕ್ಟ್ರಿಕಲ್) ಹಾಗೂ ಹಿರಿಯರು ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here