p>
ಹೊಸ್ತೋಟ:ಅಂಗನವಾಡಿ ಕೇಂದ್ರಕ್ಕೆ ಪಂಚಾಯತ್ ಅನುದಾನದಲ್ಲಿ ಸುಣ್ಣ ಬಣ್ಣ ಗೋಡೆ ಬರಹ ವರ್ಣ ರಂಜಿತ ಚಿತ್ರ ಬಿಡಿಸಿ ಅಂಗನವಾಡಿ ಮಕ್ಕಳಿಗೆ ಪೂರಕ ವಾತಾವರಣ ನಿರ್ಮಿಸಿರುತ್ತಾರೆ.ಇದರ ಉದ್ಘಾಟನೆಯನ್ನು ಗ್ರಾ.ಪಂ ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂಎಸ್ ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಸುಮವಾತಿ ವಹಿಸಿದ್ದರು. ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಪ್ರೇಮಚಂದ್ರ,ಪುಷ್ಪ ಉಪಸ್ಥಿತರಿದ್ದರು.ಹೊಸ್ತುಟ ಶಾಲೆ ಯ ಮುಖ್ಯ ಶಿಕ್ಷಕಿ ಮಾಲತಿ ವೇದಿಕೆ ಯಲ್ಲಿ ಉಪಸ್ಥಿತರಿದ್ದರು ಹಳೇ ವಿಧ್ಯಾರ್ಥಿಗಳು ಅಂಗನವಾಡಿ ಕೇಂದ್ರಕ್ಕೆ ಮಿಕ್ಸಿ ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಾಗತವನ್ನು ಅಂಗನವಾಡಿ ಕಾರ್ಯಕರ್ತೆ ಭಾರತಿ,ಧನ್ಯವಾದವನ್ನು ಆಶಾ ಕಾರ್ಯಕರ್ತೆ ಪಾರ್ವತಿ ,ನಿರೂಪಣೆಯನ್ನು ಧನ್ಯಶ್ರೀ ನೆರವೇರಿಸಿದರು.
p>