



ಪದ್ಮುಂಜ ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ನ.17 ರಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಪುರುಷೋತ್ತಮ ಗೌಡ ರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.
ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿವಿಧ ಆಟೋಟ ಸ್ಪರ್ದೆ ಚಟುವಟಿಕೆ ನಡೆಸಿ ಬಹುಮಾನ ವಿತರಣೆ ಮಾಡಲಾಯಿತು.



ಪದ್ಮುಂಜ ಶಾಲೆಗೆ ನೂತನವಾಗಿ ನೇಮಕವಾದ ಅಧ್ಯಾಪಕಿ ತೇಜಾ, ಎಸ್.ಡಿ.ಎಂ.ಸಿ ಸದಸ್ಯ ಕಾಸಿಂ ಪದ್ಮುಂಜ ಮಾತನಾಡಿ ಶುಭ ಹಾರೈಸಿದರು.ಎಸ್ ಡಿ ಎಂ ಸಿ ಸದಸ್ಯರು ದಾನಿಗಳು ಅಧ್ಯಾಪಕ ವೃಂದದವರು, ಪೋಷಕರು ಉಪಸ್ಥಿತರಿದ್ದರು.
ಮುಖ್ಯ ಅಧ್ಯಾಪಕಿ ಕೀರ್ತಿ ಯವರು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.


 
            