


ಕಲ್ಮಂಜ: ಕಲ್ಮಂಜ ಗ್ರಾಮದ ನಿಡಿಗಲ್ ಸರಕಾರಿ ಶಾಲಾ ಬಳಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಅಜ್ರಿ ಹಾರ್ಡ್‌ವೇರ್ ಮತ್ತು ಎಲೆಕ್ಕ್ಟ್ರಿಕಲ್ಸ್ ನ.18ರಂದು ಶುಭಾರಂಭಗೊಂಡಿತು.
ಉದ್ಘಾಟನೆಯನ್ನು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಹಾವೀರ ಅಜ್ರಿ, ನ್ಯಾಯವಾದಿ ರತ್ನವರ್ಮ ಬುಣ್ಣು, ಭುಜಬಲಿ ಧರ್ಮಸ್ಥಳ, ಹುಣಿಪಾಜೆಯ ರತನ್ ಕುಮಾರ್ ಜೈನ್, ಧರ್ಮಸ್ಥಳ ಲೆಕ್ಕ ಪತ್ರ ವಿಭಾಗದ ವ್ಯವಸ್ಥಾಪಕ ಪುರಂದರ ಭಟ್, ಕೃಷಿ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ, ಪ್ರಿಯಾಂಕ್ ಜೈನ್, ಸುನಂದಾ ದೇವಿ, ಜಿತೇಶ್ ಉಪ್ಪಿನಂಗಡಿಯ ಉದ್ಯಮಿ ವಜ್ರ ಕುಮಾರ್, ನಿವೃತ್ತ ಪಿ.ಡಿ.ಓ. ರತ್ನರಾಜ್ ಜೈನ್, ಭರತ್, ಉಜಿರೆ ಮಹಾವೀರ ಡ್ರೆಸ್ ಮಾಲಕ ಪ್ರಭಾಕರ್, ಅಮೃತ್ ಸಿಲ್ಕ್ಸ್ ನ ಪ್ರಶಾಂತ ಜೈನ್, ಎಸ್.ಎನ್.ವಸಂತ್, ವಿಶ್ವನಾಥ್ ಟಿ., ವಿನಯಚಂದ್ರ ಜೈನ್, ವಿಜಯಚಂದ್ರ ಜೈನ್, ಧನ್ಯಕುಮಾರ್, ಉದಯ್ ಕುಮಾರ್ ಕಂಬಳಿ, ಧನಕೀರ್ತಿ ಆರಿಗ, ಪ್ರಭಾಕರ ಪೂಜಾರಿ ಧರ್ಮಸ್ಥಳ, ಮಲ್ಲಿಕ್ ಜೈನ್, ಮಂಜುನಾಥ್ ಶೆಟ್ಟಿ, ಶುಭಚಂದ್ರರಾಜ ಮೊದಲಾದವರು ಉಪಸ್ಥಿತರಿದ್ದರು.

ಶಿಶಿರ್ ಇಂದ್ರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನೆರವೇರಿತು.

ಮಳಿಗೆಯಲ್ಲಿ ಗೃಹ ನಿರ್ಮಾಣಕ್ಕೆ ಬೇಕಾದ ಸಿಮೆಂಟ್, ಕಬ್ಬಿಣ, ಪೈಪ್ ಫಿಟ್ಟಿಂಗ್ಸ್, ಪ್ಲಮ್ಮಿಂಗ್ ಐಟಮ್ಸ್, ವಾಟರ್ ಟ್ಯಾಂಕ್, ಬಲ್ಬ್, ಸ್ವಿಚ್, ಎಲೆಕ್ಟ್ರಿಕ್ ಐಟಮ್ಸ್, ಪಂಪ್, ಎಲ್ಲಾ ಹಾರ್ಡ್‌ವೇರ್ ಐಟಮ್ಸ್ ಗಳು ಲಭ್ಯವಿದೆ ಎಂದು ಮಾಲಕ ಶುಚಿತ್ ಕುಮಾರ್ ತಿಳಿಸಿ ಸರ್ವರ ಸಹಕಾರ ಕೋರಿದರು.