

ಕಕ್ಯಪದವು: ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ನ.15ರಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಮಕ್ಕಳ ದಿನಾಚರಣೆಯನ್ನು ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟ ನ್ ಲೋಬೊ, ಸಂಯೋಜಕ ಯಶವಂತ.ಜಿ.ನಾಯಕ್, ಮುಖ್ಯ ಶಿಕ್ಷಕಿ ಕು.ವಿಜಯಾ.ಕೆ ಇವರು ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು.
ಶಿಕ್ಷಕರು ಮಕ್ಕಳಿಗೆ ಅನೇಕ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನಗಳನ್ನು ವಿತರಿಸಲಾಯಿತು.ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳ ಮನರಂಜಿಸಲು ಶಿಕ್ಷಕರು ನೃತ್ಯ, ಪ್ರಹಸನ ಮತ್ತು ಹಾಡುಗಳನ್ನು ನೀಡಿ ಮನರಂಜಿಸಿದರು.
ಕಾರ್ಯಕ್ರಮವನ್ನು ಸಹ ಶಿಕ್ಷಕಿ ಜಯಲಕ್ಷ್ಮಿ ಅವರು ನಿರೂಪಿಸಿದರು.ಸಹ ಶಿಕ್ಷಕಿ ಕುಶಲ.ಟಿ ರವರು ವಂದಿಸಿದರು.