ಸವಣಾಲು ಗ್ರಾಮದ ಪಲ್ಗುಣಿ ಮಹಿಳಾ ಮಂಡಲದ ವತಿಯಿಂದ ನಡೆಯುವ ಮಕ್ಕಳ ಕುಣಿತ ಭಜನಾ ತರಬೇತಿಯನ್ನು ನ.12ರಂದು ರಾಧಾಕೃಷ್ಣ ಸಭಾಭವನದಲ್ಲಿ ಪ್ರಾರಂಭಿಸಲಾಯಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಮೇಲಂತಬೆಟ್ಟು ಗ್ರಾ.ಪಂ ಉಪಾಧ್ಯಕ್ಷ ಲೋಕನಾಥ ಶೆಟ್ಟಿ ಇವರು ಉದ್ಘಾಟಿಸಿದರು.
ಭಜನಾ ತರಬೇತಿದಾರರಾದ ಸಂದೇಶ ಮದ್ದಡ್ಕ ಭಾಗವಹಿಸಿ ಕುಣಿತ ಭಜನೆಯ ಮಹತ್ವವನ್ನು ವಿವರಿಸಿ ಎಲ್ಲರ ಸಹಕಾರವನ್ನು ಕೋರಿದರು.ಕುಣಿತ ಭಜನಾ ತರಬೇತಿಯ ಜವಾಬ್ದಾರಿಯನ್ನು ವಹಿಸಿದ ಫಲ್ಗುಣಿ ಮಹಿಳಾ ಮಂಡಲದ ಜಯಲಕ್ಷ್ಮಿ ಗ್ರಾಮ ಪಂಚಾಯಿತಿ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿ ಎಲ್ಲರ ಸಹಕಾರ ಕೋರಿದರು.75 ಮಕ್ಕಳು ಭಜನ ತಂಡದಲ್ಲಿ ಉತ್ಸಾಹದಿಂದ ಸೇರಿಕೊಂಡಿದ್ದಾರೆ.
ಸಮಾರಂಭದಲ್ಲಿ ಭಜನಾ ಮಂಡಳಿ ಉಪಾಧ್ಯಕ್ಷ ಪ್ರಭಾಕರ ಭಟ್ ಜಿ, ದಯಾನಂದ ಗೌಡ, ಪ್ರಕಾಶ್, ಯೋಗೀಶ್, ಪಂಚಾಯಿತಿ ಸದಸ್ಯರಾದ ಸುಮಲತಾ ಚಂದ್ರಶೇಖರ್ ಹಾಗೂ ಇದಕ್ಕೆ ಸಹಕರಿಸಿದ ಯೋಗೀಶ್, ಪುರಂದರ ಪೂಜಾರಿ, ಸಂತೋಷ್ ಗೌಡ ಮತ್ತು ಫಲ್ಗುಣಿ ಮಹಿಳಾ ಮಂಡಲದ ವೀಣಾ, ಗಣೇಶ್ ಭಂಡಾರಿ, ಭಾರತಿ, ಸತೀಶ್ ಶೆಟ್ಟಿ, ಸುಮಲತಾ, ಜಯ ಶೆಟ್ಟಿ ಭಾಗವಹಿಸಿದರು.
ಕಾರ್ಯಕ್ರಮವನ್ನು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಗಣೇಶ್ ಭಂಡಾರಿ ಸ್ವಾಗತಿಸಿ, ನಿರೂಪಿಸಿದರು.