ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ವಿತರಣೆ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ ಉಜಿರೆ ವಲಯದ ಉಜಿರೆ ಕಾರ್ಯಕ್ಷೇತ್ರದ ಮಂಜುಶ್ರೀ ಸ್ವ-ಸಹಾಯ ಸಂಘದ ಪುಷ್ಪ ರವರ ಮಗನಾದ ಮಂಜುನಾಥ ರವರು ತೀರಾ ಅನಾರೋಗ್ಯದ ಕಾರಣ ಓಡಾಡಲು ಆಗದೇ ಇದ್ದು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಿಶೇಷವಾಗಿ ಪೂಜ್ಯ ಖಾವಂದರು ಮಂಜೂರು ಮಾಡಿರುವ ವೀಲ್ ಚೇರ್ ನ್ನು ತಾಲೂಕು ಯೋಜನಾಧಿಕಾರಿಯಾದ ಸುರೇಂದ್ರ ರವರು ವಿತರಿಸಿದರು.

ಈ ಸಂದರ್ಭದಲ್ಲಿ ಉಜಿರೆ ಛತ್ರಪತಿ ಶಿವಾಜಿ ಭಜನಾ ಮಂಡಳಿ ಅಧ್ಯಕ್ಷ ಪ್ರಶಾಂತ್ ರವರು ಉಪಸಿತರಿದ್ದರು.ಮೇಲ್ವಿಚಾರಕಿಯಾದ ವನಿತ, ಉಜಿರೆ B ಸೇವಾಪ್ರತಿನಿಧಿ ಸೌಮ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here