ಪಿಲ್ಯ ಗುಡ್ ಫ್ಯೂಚರ್ ಚ್ಯೆಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

0

ಪಿಲ್ಯ: ಗುಡ್ ಫ್ಯೂಚರ್ ಚ್ಯೆಲ್ಡ್ ಆಂಗ್ಲ ಮಾಧ್ಯಮ ಶಾಲೆ ಪಿಲ್ಯ ಇಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ ಲಾಲ್ ರವರ ಹುಟ್ಟುಹಬ್ಬ ಆಗಿದ್ದು ಅದನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು.

ಸ್ವಾತಂತ್ರ ಸೇನಾನಿಯಗಿ ಅವರು ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಲಾಯಿತು.ಗುಣಗಾನ ಮಾಡಲಾಯಿತು.ಇದರ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನ ಏರ್ಪಡಿಸಿ ಬಹುಮಾವ ವಿತರಣೆ ಮಾಡಲಾಯಿತು.

ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ನಸೀರ್ ಅಹಮದ್ ಖಾನ್ ವಹಿಸಿ ಸಂಧರ್ಬೋಚಿತವಾಗಿ ಮಾತಾಡಿ ಶುಭ ಕೋರಿದರು.ಶಿಕ್ಷಕಿ ಫ್ಯೆಝೂನ್ ಸ್ವಾಗತಿಸಿ, ಮುಖ್ಯ ಶಿಕ್ಷಕಿ ನಿರ್ಮಲರವರು ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳಿಗೆ ಶುಭ ಕೋರಿದರು.ಶಿಕ್ಷಕಿ ಕಾವ್ಯ ನಿರೂಪಿಸಿ, ಶಿಕ್ಷಕಿ ಲಕ್ಷ್ಮಿ ವಂದಿಸಿದರು.

LEAVE A REPLY

Please enter your comment!
Please enter your name here