ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು, ಇಲ್ಲಿನ “ಮಾನವಿಕ ಸಂಘದ ಉದ್ಘಾಟನಾ ಸಮಾರಂಭ ಮತ್ತು “ಮಾನವಿಕ ವಿಷಯಗಳ ಪ್ರಾಮುಖ್ಯತೆ ಕುರಿತು ವಿಚಾರ ಸಂಕಿರಣ ಎಂಬ ಸಮಾರಂಭವನ್ನು ನ.?? ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ವಿದ್ಯಾ.ಎಸ್ ಇವರು “ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ” ಎಂದು ಹೇಳುವುದರ ಮೂಲಕ ವಿದ್ಯಾರ್ಥಿ ಗಳನ್ನು ಮಾನವಿಕ ವಿಷಯಗಳ ಕಡೆ ಆಸಕ್ತಿ ಹೊಂದುವಂತೆ ಪ್ರೋತ್ಸಾಹಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅಲೆಕ್ಸ್ ಐವನ್ ಸಿಕ್ವೇರಾ ಇವರು ಕಲಾ ವಿಭಾಗದ ಪ್ರಾಮುಖ್ಯತೆ ವಿವಿಧ ಅವಕಾಶಗಳ ಬಗ್ಗೆ ಹಾಗೂ ಯಾವ ರೀತಿ ಕಲಾ ವಿಭಾಗದ ವಿದ್ಯಾರ್ಥಿಗಳು ಸಾಧನೆ ಮಾಡಬಹುದೆಂದು ನೈಜ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಸಂಯೋಜಕರಾದ ಮಹಮ್ಮದ್ ನೌಶಾದ್. ಪೂಜಾ.ಎಸ್.ಎಸ್, ವಿನೀತ್ ಸಿಕ್ವೇರಾ, ಪಲ್ಲವಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಪ್ರೊ.ಪ್ರಕಾಶ್ ಕ್ರಮಧಾರಿ ಉಪಸ್ಥಿತರಿದ್ದು , ಕಾರ್ಯಕ್ರಮದ ಸಂಯೋಜಕಿಯಾದ ರಕ್ಷಿತಾ. ಎಸ್ ಇವರು ಅತಿಥಿಗಳನ್ನು ಸ್ವಾಗತಿಸಿ, ನಿಝ್ಮಾ ಮತ್ತು ವಿವೇಕ್ ಕಾರ್ಯಕ್ರಮವನ್ನು ನಿರೂಪಿಸಿದರು.