ಉಜಿರೆಯಲ್ಲಿ ಡಾ.ಸೂರಜ್’ಸ್ ಡೆಂಟಲ್ ಕ್ಲಿನಿಕ್ ಶುಭಾರಂಭ

0

ಉಜಿರೆ: ಉಜಿರೆ ಮುಖ್ಯ ರಸ್ತೆಯ ಪಾರಿಜಾತ ಕಾಂಪ್ಲೆಕ್ಸ್ ಅಶ್ವಿನಿ ಕ್ಲಿನಿಕ್ ಬಳಿ ಡಾ.ಸೂರಾಜ್’ಸ್ ಡೆಂಟಲ್ ಕ್ಲಿನಿಕ್ ನ.12 ರಂದು ಶುಭಾರಂಭಗೊಂಡಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡುವೆಟ್ನಾಯ ಉದ್ಘಾಟಿಸಿ ಶುಭ ಹಾರೈಸಿದರು.

ಉಜಿರೆ ಅಶ್ವಿನಿ ಕ್ಲಿನಿಕ್ ನ ಡಾ.ಅಶ್ವಿನ್, ಡಾ.ಚಾರುಲತಾ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಅರ್ಚಕ ಸತ್ಯಪ್ರಿಯ ಕಲ್ಲೂರಾಯ, ನಿವೃತ್ತ ಅಧ್ಯಾಪಕ ಬಾಲಕೃಷ್ಣ ಭಟ್, ಉಜಿರೆಯ ಡಾ.ಪ್ರಕಾಶ, ಬೆಳಾಲು ಪ್ರಾ.ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಪದ್ಮ ಗೌಡ, ಉಮೇಶ ಪಡ್ಡಿಲ್ಲಾಯ, ಪುರುಷೋತ್ತಮ ಪರ್ಲತ್ತಾಯ, ವೆಂಕಟೇಶ್ ಬೆಳಾಲು, ಸುನೀಲ್ ಕೋಲ್ಪಾಡಿ ಇನ್ನಿತರ ಗಣ್ಯರು ಹಿತೈಷಿಗಳು ಹಾಜರಿದ್ದು ಶುಭ ಕೋರಿದರು.

ಶ್ರೀಶ ಕೆರ್ಮುಣ್ಣಾಯ ಪ್ರಸ್ತಾವನೆಗೈದರು. ಸುಲೋಚನಾ ಕೆರ್ಮುಣ್ಣಾಯ, ಡೆಂಟಲ್ ಸರ್ಜನ್ ಡಾ.ಸೂರಜ್ ಎಸ್.ಕೆರ್ಮುಣ್ಣಾಯ, ಜ್ಯೋತಿ ಮತ್ತು ರಾಧಾಕೃಷ್ಣ ಕೆರ್ಮುಣ್ಣಾಯ ಎಸ್., ಸಿಂಚನ ಕೆ.ಎಸ್ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here