ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಬೀಡಿ ಕೆಲಸ ಗಾರರ ಸಂಘ ಸಿಐಟಿ ಯು ವತಿಯಿಂದ ಬೀಡಿ ಕಾರ್ಮಿಕರ ಗ್ರಾಚ್ಯುವಿಟಿ ನೀಡುವಂತೆ ಹಾಗೂ 3 ವರ್ಷದಿಂದ ಬಾಕಿ ಡಿ ಎ ಹೈಕೋರ್ಟ್ ಬೆಲೆ ನೀಡಿ ತಕ್ಷಣ ಪಾವತಿಸಿ ಕನಿಷ್ಠ ವೇತನ ಜಾರಿಯಾಗಿ 6 ವರ್ಷ ಆದರೂ ನೀಡಿದೆ ಕಾರ್ಮಿಕರ ಕಡಿಮೆ ವೇತನದಲ್ಲಿ ದುಡಿಸಿ ಶೋಷಿಸುವುದನ್ನು ಖಂಡಿಸಿ ಕನಿಷ್ಠ ಸಾವಿರ ಬೀಡಿಗೆ ರೂ 400 ಕ್ಕೆ ಏರಿಸಬೇಕು ಎಂದು ಒತ್ತಾಯಿಸಿ ನ.9 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಎಂ.ಭಟ್ ಮಾತನಾಡಿದರು.
ಉಪಾಧ್ಯಕ್ಷೆ ನೆಬಿಸ, ಪುಷ್ಪ, ಅಶ್ವಿನಿ ಸದಸ್ಯರು ಹಾಜರಿದ್ದರು.ಬಳಿಕ ಮನವಿ ನೀಡಿದರು.
p>