ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆಯ ಸಮ್ಯಗ್ದರ್ಶನ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳಿಂದ ನವೆಂಬರ್ 4ರಂದು ಆಯೋಜಿಸಲ್ಪಟ್ಟ ಕಾರ್ಗಿಲ್ ಯುದ್ಧದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಕ್ಷೇಮಪಾಲನ ಸಮಿತಿಯ ಮುಖ್ಯಸ್ಥ ನಟರಾಜ ಹೆಚ್.ಕೆ ಮಾತನಾಡಿ “ಪ್ರತಿಯೊಬ್ಬ ಭಾರತೀಯನೂ ಕಾರ್ಗಿಲ್ ಯುದ್ಧದ ವಿಚಾರವಾಗಿ ಮಾತನಾಡಬೇಕು.ತ್ಯಾಗ ಹೋರಾಟದ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿಯಬೇಕಿದೆ.ಭಾರತ ದೇಶಕ್ಕೆ ಪಾಕಿಸ್ತಾನವು ಮಗ್ಗಲ ಮುಳ್ಳಿನಂತೆ.ಪಾಕಿಸ್ತಾನಕ್ಕೆ ಈಗಲೂ ಭಾರತದ ಕಿರೀಟ ಕಾಶ್ಮೀರ ಬೇಕು. ರಕ್ತದಿ ಬರೆದ ಈ ಚರಿತ್ರೆ ರಕ್ತಕ್ಕೆ ಸೇರಬೇಕಿದೆ.ನಾವು ಪಾಕಿಸ್ತಾನಕ್ಕೆ ಹೂ ಕೊಟ್ಟರೆ ಅವರು ನಮಗೆ ಬುಲ್ಲೆಟ್ ಕೊಡ್ತಾರೆ, ಪ್ರೀತಿ ಕೊಟ್ಟರೆ ಭಯ ಕೊಡ್ತಾರೆ.ಶತ್ರುಗಳು ಬೇರೆಲ್ಲೂ ಇರುವುದಿಲ್ಲ ನಮ್ಮ ಜೊತೆಯೇ ಇರುತ್ತಾರೆ.ಪಾಕಿಸ್ತಾನ ಮೇಲ್ನೋಟಕ್ಕೆ ತಣ್ಣಗಿದ್ದು ಒಳಗೆ ಯುದ್ಧದ ಸಂಚು ನಡೆಸುತ್ತಿತ್ತು. ಸಿಕ್ಕ 15 ಜನ ಸೈನಿಕರನ್ನು ತುಂಬಾ ಕ್ರೂರವಾಗಿ ನಡೆಸಿಕೊಂಡು ಚಿತ್ರಹಿಂಸೆ ಕೊಟ್ಟು ಸಾಯಿಸಿದರು. ಭಾರತವು ಹಲವು ತಯಾರಿಗಳಿಂದ , ಯೋಜನೆಗಳಿಂದ ಕಾರ್ಗಿಲ್ ಯುದ್ಧವನ್ನು ಗೆದ್ದಿತು. ಮೊದಲು ಕೈನಲ್ಲಿ ಗನ್ ಇದ್ದರೂ ಶೂಟ್ ಮಾಡಲು ಅನುಮತಿ ಬೇಕಿತ್ತು.ಆದರೆ 2014 ರಲ್ಲಿ ಸರ್ಕಾರ ಬದಲಾದ ಮೇಲೆ ನರೇಂದ್ರ ಮೋದಿಯವರು ಹೇಳಿದ್ರು ಅತ್ತ ಕಡೆಯಿಂದ ಒಂದು ಬುಲ್ಲೆಟ್ ಬಂದ್ರೆ ಇತ್ತ ಕಡೆಯಿಂದ ನೂರು ಬುಲ್ಲೆಟ್ ಹೋಗಬೇಕು ಎಂದು.ನಮ್ಮ ಸೈನಿಕರಿಗೆ ಆನೆಬಲ ಸಿಕ್ಕಿದೆ.ಭಾರತೀಯರಾಗಿ ಹುಟ್ಟಿರುವ ನಾವುಗಳು ಅದೃಷ್ಟಶಾಲಿಗಳು. ಭಾರತ ದೇಶವು ಹಲವು ಜಾತಿ, ಧರ್ಮಗಳನ್ನ ಒಳಗೊಂಡು ವಸುದೈವ ಕುಟುಂಬಕಂ ಎಂಬಂತೆ ಬಾಳುತಿದೆ.ಕಾರ್ಗಿಲ್ ನ ರಕ್ತಪಾತ ನಮ್ಮ ನೆನಪಿನಿಂದ ಮಾಸಬಾರದು. ನಾವೆಲ್ಲರೂ ದೇಶದ ರಕ್ಷಣೆಗಾಗಿ ಸದಾ ಸಿದ್ದರಾಗಿರೋಣ”ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಯೋಜನಾಧಿಕಾರಿಗಳಾದ ಪ್ರೊ.ದೀಪ ಆರ್.ಪಿ. ಅವರು ಮಾತನಾಡಿ, “ನಮ್ಮ ಸೈನಿಕರ ಬಲಿದಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ನಮ್ಮ ಸ್ವಯಂಸೇವಕರ ಪ್ರತಿ ಶಾಲೆಗೆ ಹೋಗಿ ಕಾರ್ಯಕ್ರಮಗಳನ್ನು ಕೈಗೊಳಲಿದ್ದಾರೆ.ನಮ್ಮ ಮುಂದಿನ ಪೀಳಿಗೆಗೆ ದೇಶಪ್ರೇಮವನ್ನು ತುಂಬಬೇಕಿದೆ”ಎಂದು ಹೇಳಿದರು.
ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ.ಹೆಚ್ ಮಾರ್ಗದರ್ಶನ ನೀಡಿದರು. ಸ್ವಯಂಸೇವಕಿ ಶ್ವೇತಾ ಸ್ವಾಗತಿಸಿ, ಚಿಂತನ ಕಾರ್ಯಕ್ರಮವನ್ನ, ನಿರೂಪಿಸಿ ವಂದಿಸಿದರು.