

ಬೆಳಾಲು: ಶ್ರೀ ಅಯ್ಯಪ್ಪ ಭಕ್ತ ವೃಂದ ಬೆಳಾಲು ಆಶ್ರಯದಲ್ಲಿ ಅನಂತೋಡಿ ಶ್ರೀ ಅನಂತ ಪದ್ಮನಾಭಾ ದೇವಸ್ಥಾನದ ವಠಾರದಲ್ಲಿ ಜ.6 ರಂದು ನಡೆಯಲಿರುವ ಶ್ರೀ ಅಯ್ಯಪ್ಪ ದೀಪೋತ್ಸವ ಹಾಗೂ ಸೇವೆಯ ಕುರಿತು ಚಾರ್ಮಾಡಿ ಕುಂಜಿರ ಗುರುಸ್ವಾಮಿಗೆ ಬೆಳಾಲು ಅಯ್ಯಪ್ಪ ಭಕ್ತ ವೃಂದ ಸಮಿತಿಯಿಂದ ತಾಂಬೂಲ ಕಾಣಿಕೆ ನ.5 ರಂದು ಸಮಿತಿಯ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ ನೀಡಿದರು.
ಕಾರ್ಯದರ್ಶಿ ಶಶಿಧರ ಆಚಾರ್ಯ, ಗೌರವ ಸಲಹೆಗಾರ ಕೇಶವ ಟೈಲರ್, ಉಪಾಧ್ಯಕ್ಷ ಬೊಮ್ಮಣ್ಣ ಗೌಡ ಗುಂಡಿಗದ್ದೆ, ಗಣೇಶ ಗೌಡ ಅನಂತೋಡಿ ಉಪಸ್ಥಿತರಿದ್ದರು.