




ಬೆಳ್ತಂಗಡಿ : ನಿಡ್ಲೆ ಗ್ರಾಮದ ಕುದ್ರಾಯ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ನ.4 ರಂದು ಸಂಜೆ ಯಾವುದೇ ಪರವಾನಿಗೆ ಇಲ್ಲದೆ ಮದ್ಯ ಸೇವನೆ ಮಾಡುತ್ತಿದ್ದ ಕಳೆಂಜ ಗ್ರಾಮದ ನಿವಾಸಿಗಳಾದ ಸದಾನಂದ (25), ದಯಾನಂದ ಪ್ರಾಯ (28),ಅನೀಶ್ ಕುಮಾರ್ ಪ್ರಾಯ (32) ಆರೋಪಿಗಳನ್ನು ಧರ್ಮಸ್ಥಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳಿಂದ ಮದ್ಯ ತುಂಬಿದ 02 ಸಾಚೇಟ್ ಪ್ಯಾಕೇಟ್ ಗಳನ್ನು ಹಾಗೂ ಮಧ್ಯ ಸೇವಿಸಲು ಬಳಸಿದ ಸ್ಟೀಲ್ ಲೋಟ-2 ಗಳನ್ನು ವಶಕ್ಕೆ ಪಡೆದಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 87/2023 ಕಲಂ: 15(A) 32(3) ಕರ್ನಾಟಕ ಅಬಕಾರಿ ಕಾಯಿದೆಯಂತೆ ಪ್ರಕರಣ ದಾಖಲಿಸಲಾಗಿದೆ









