ಹೊಸಂಗಡಿ : ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಉದ್ಯಮಿ ಹೊಸಂಗಡಿಯ ಧರಣೇಂದ್ರ ಕುಮಾರ್ ರವರಿಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ವತಿಯಿಂದ ಸಾಮಾಜಿಕ ಮತ್ತು ಶುದ್ಧ ರಾಜಕೀಯ ಸೇವೆಗಾಗಿ ಸೇವಾ ರತ್ನ ಪ್ರಶಸ್ತಿ ನೀಡಿ ನ.4 ರಂದು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೌರವಿಸಿದರು.
ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಮಂಗಳೂರು ಜಂಟಿ ಆಶ್ರಯದಲ್ಲಿ ಸಮಾಜದ ವಿವಿಧ ವಿಭಾಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಾಧಕರಿಗೆ ಸೇವೆಯನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮ ಮಂಗಳೂರಿನ ಅತ್ತಾವರ ರೋಡ್ ಟ್ರಿನಿಟಿ ಬಿಲ್ಡಿಂಗ್ ನಲ್ಲಿ ನಡೆಯಿತು.
ಧರಣೇಂದ್ರ ಕುಮಾರ್ ನೈರ್ಮಲ್ಯ, ಪರಿಸರ ರಕ್ಷಣೆ ಅಂತರ್ಜಲ ಅಭಿವೃದ್ಧಿಗೆ ನದಿ ಮತ್ತು ತೊಡಿಗೆ ಅಡ್ಡಲಾಗಿ ಸಾಂಪ್ರದಾಯಕ ಕಟ್ಟಗಳನ್ನು ಕಟ್ಟಿಸಿ ಸಂಘ ಸಂಸ್ಥೆಗಲ್ಲಿಂದ ಗೌರವಿಸಲ್ಪಟ್ಟಿದ್ದಾರೆ.ಉತ್ತರ ಕನ್ನಡ ಜಿಲ್ಲೆಯರಾಣೆಬೆನ್ನೂರಿನಲ್ಲಿ ಕೊಡಮಾಡಿದ ಬಸವ ರತ್ನ ಪ್ರಶಸ್ತಿ ಪಡೆದಿದ್ದರು.ಬೆಳ್ತಂಗಡಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರಾಗಿ, ತಾಲೂಕು ಪಂಚಾಯತ್ ಸದಸ್ಯರಾಗಿ ,ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ,ಹೊಸಂಗಡಿ ಪ್ರೆಂಡ್ಸ್ ಕ್ಲಬ್ ಅಧ್ಯಕರಾಗಿದ್ದ ಸಮಯದಲ್ಲಿ ಅತ್ಯುತ್ತಮ ಯುವ ಸಂಸ್ಥೆಯೆಂದು ರಾಜ್ಯಮಟ್ಟದ ಪ್ರಶಸ್ತಿ ಪಡೆದು. ಹೊಸಂಗಡಿ ಗ್ರಾಮ ಪಂಚಾಯತ್ ಗೆ ರಾಷ್ಟ್ರ ಮಟ್ಟದಲ್ಲಿ ಸ್ವಚ್ಛ ಗ್ರಾ ಪಂ ಪ್ರಶಸ್ತಿ ಸಿಗುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.
ಅಲ್ಲದೆ ಸ್ವಚ್ಛತೆ ಬಗ್ಗೆ ರಾಜ್ಯದ ಜಿಲ್ಲೆಗಳ ಸಿಇಓ ಗಳಿಗೆ ಸಂಪನ್ಮೂಲ ವ್ಯೆಕ್ತಿಯಾಗಿ ಕೆಲಸ ಮಾಡಿದ್ದಾರೆ.ರಾಜಕೀಯ ಸೇವೆಯೊಂದಿಗೆ ಸಾಮಾಜಿಕ ಸೇವೆಯನ್ನು ಜೋಡಿಸಿ ಸ್ವಚ್ಛತೆ ಮತ್ತು ಪರಿಸರ ರಕ್ಷಣೆ ಬಗ್ಗೆ ವಿಶೇಷ ಕಾಳಜಿ ವಹಿಸಿ ಒಂದೇ ವರ್ಷದಲ್ಲಿ ನದಿ ಮತ್ತು ತೋಡುಗಲಿಗೆ ಅಡ್ಡಲಾಗಿ 50 ಸಾಂಪ್ರದಾಯಕ ಕಟ್ಟಗಳನ್ನು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಮತ್ತು ಊರವರ ಸಹಕಾರದಲ್ಲಿ ಕಟ್ಟಿಸಿ ಅಂತರ್ ಜಲವನ್ನು ವೃದ್ಧಿಸಿದ್ದು ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದರು.
ಇವರ ಸಮಾಜ ಸೇವೆಯನ್ನು ಗುರುತಿಸಿ “ವಾಲ್ಯೂ ಅವಾರ್ಡ್ “ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಗೌರವಿಸಿದರು.