ತಾಲೂಕು ಮಟ್ಟದ ಪ್ರೌಢ ವಿಭಾಗದ ಅಥ್ಲೆಟಿಕ್ಸ್ ಪಂದ್ಯಾಟ: ಸೈಂಟ್ ಪೀಟರ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಅಳದಂಗಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ ವೇಣೂರು ಇಲ್ಲಿ ನಡೆದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆ ಅಳದಂಗಡಿ ಇಲ್ಲಿನ ವಿದ್ಯಾರ್ಥಿಗಳಾದ ಹತ್ತನೇ ತರಗತಿಯ ಲಿಯಾನಾ ಪಾಯ್ಸ್ ಎತ್ತರ ಜಿಗಿತದಲ್ಲಿ ಪ್ರಥಮ ಮತ್ತು ಟ್ರಿಪಲ್ ಜಂಪಲ್ಲಿ ದ್ವಿತೀಯ ಸ್ಥಾನ, ಎಂಟನೇ ತರಗತಿಯ ವಿದ್ಯಾರ್ಥಿನಿ ಪ್ರತೀಕ್ಷ ಇವರು 1500 ಮತ್ತು 3000ಮೀಟರ್ ಓಟದಲ್ಲಿ ತೃತೀಯ ಸ್ಥಾನ, ಎಂಟನೇ ತರಗತಿ ಲಿಯೋನಾರ್ಡ್ 600 ಮೀಟರ್ ಓಟದಲ್ಲಿ ತೃತೀಯ ಸ್ಥಾನ, ಎಂಟನೇ ತರಗತಿಯ ಸೃಜನ್ ಎಸ್ ಹರ್ಡಲ್ಸ್ ನಲ್ಲಿ ತೃತೀಯ ಸ್ಥಾನ, ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಕೇವನ್ ರವರು ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here